i
ಜೆಡಿಎಸ್ ನಾಯಕ ಕುಮಾರಸ್ವಾಮಿಗೆ ಕಿಸ್ ಕೊಟ್ಟು ನಗೆ ಬೀರಿದ ಮಹಿಳೆ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದ ಮಾರುತಿ ನಗರದಲ್ಲಿ ಕುಮಾರಸ್ವಾಮಿ ನೇತೃತ್ವದಲ್ಲಿ ಪಂಚರತ್ನಯಾತ್ರೆ ಅದ್ಧೂರಿಯಾಗಿ ಸಾಗುತ್ತಿತ್ತು. ವಾಹನದ ಮೇಲೆ ಕುಮಾರಸ್ವಾಮಿ ಮತಯಾಚನೆ ಮಾಡುತ್ತಿದ್ದ ಸಂದರ್ಭದಲ್ಲೇ ಎಚ್ ಡಿಕೆ ಅಭಿಮಾನಿ, ಜೆಡಿಎಸ್ ಮಹಿಳಾ ಕಾರ್ಯಕರ್ತೆಯೊಬ್ಬರು ಕುಮಾರಸ್ವಾಮಿಗೆ ಕಿಸ್(ಮುತ್ತು) ಕೊಟ್ಟು ಎಚ್ಚರಿ ಮೂಡಿಸಿದ್ದಾರೆ.
ಪಂಚರತ್ನದ ವಾಹನದ ಮೇಲೆ ಭಾಷಣ ಮುಗಿಸಿ ಹಿಂದಕ್ಕೆ ತಿರುಗುತ್ತಿದ್ದಾಗ ಕುಮಾರಸ್ವಾಮಿರನ್ನ ಹಿಡಿದು ಮಹಿಳೆಯೊಬ್ಬರು ಕಿಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.