i
ಇಬ್ಬರು ವಿದ್ಯಾರ್ಥಿನಿಯರು ಸೇರಿದಂತೆ ಮೂರು ವಿದ್ಯಾರ್ಥಿಗಳು ನೀರು ಪಾಲು…
ಚಂದ್ರವಳ್ಳಿ ನ್ಯೂಸ್, ಚಿಕ್ಕಬಳ್ಳಾಪುರ:
ಬೆಂಗಳೂರಿನ ಇಬ್ಬರು ಯುವತಿಯವರು ಹಾಗೂ ಓರ್ವ ಯುವಕ ಸೇರಿ ಆರು ಮಂದಿ ಈಜಾಡಲು ಹೋಗಿದ್ದು ಅದರಲ್ಲಿ ಮೂರು ಮಂದಿ ವಿದ್ಯಾರ್ಥಿಗಳು ಚಿಕ್ಕಬಳ್ಳಾಪುರದ ಶ್ರೀನಿವಾಸ ಸಾಗರ ಡ್ಯಾಂನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಬೆಂಗಳೂರಿನಿಂದ ಶ್ರೀನಿವಾಸ ಸಾಗರ ಡ್ಯಾಂ ಟ್ರಿಪ್ ಗೆ ಒಟ್ಟು 6 ವಿದ್ಯಾರ್ಥಿಗಳು ಈಜಾಡಲು ನೀರಿಗೆ ಇಳಿದಿದ್ದ ಮೂವರು ವಿದ್ಯಾರ್ಥಿಗಳು ನೀರು ಪಾಲಾಗಿದ್ದಾರೆ. ಮೃತರನ್ನು ಪೂಜಾ, ರಾಧಿಕಾ ಹಾಗೂ ಇಮ್ರಾನ್ ಎಂದು ಗುರುತಿಸಲಾಗಿದೆ. ಬೆಂಗಳೂರಿನಲ್ಲಿ ಡಿ ಫಾರ್ಮಸಿ ಓದುತ್ತಿದ್ದ ಈ ವಿದ್ಯಾರ್ಥಿಗಳು ಬೈಕ್ನಲ್ಲಿ ಶ್ರೀನಿವಾಸ ಸಾಗರ ಡ್ಯಾಂ ತೆರಳಿದ್ದು, ಮಧ್ಯಾಹ್ನದ ವೇಳೆ ಡ್ಯಾಮ್ನಲ್ಲಿ ಈಜಲು ಮುಂದಾಗಿದ್ದಾರೆ. ಈ ವೇಳೆ ಡ್ಯಾಮ್ನ ಒಳಗಿದ್ದ ಕಲ್ಲಿನ ಮೇಲೆ ನಿಂತುಕೊಂಡು ಒಬ್ಬರನ್ನೊಬ್ಬರು ಕೈ ಹಿಡಿದುಕೊಂಡು ಆಳವಿರುವ ಪ್ರದೇಶಕ್ಕೆ ಹೋಗಿದ್ದು ಒಬ್ಬರು ಕಾಲುಜಾರಿ ಬಿದ್ದಿದ್ದಾರೆ. ಅವರನ್ನು ರಕ್ಷಣೆ ಮಾಡಲು ಎಲ್ಲರೂ ಕೈ- ಕೈ ಹಿಡಿದುಕೊಂಡೇ ಸರಪಳಿ ರೀತಿಯಲ್ಲಿ ಮುಂದಾಗಿದ್ದಾರೆ. ಈ ವೇಳೆ ಮೊದಲು ಕಾಲು ಜಾರಿ ಬಿದ್ದ ವಿದ್ಯಾರ್ಥಿನಿಯ ಜೊತೆಗೆ ಮತ್ತಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.