i
ಬ್ಯೂಟಿ ಪಾರ್ಲರ್ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಪತ್ನಿ ಬಲಿ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬ್ಯೂಟಿ ಪಾರ್ಲರ್ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಬೆಳೆಸಿದ ಪತಿಯ ಕೃತ್ಯಕ್ಕೆ ಪತ್ನಿ ಬಲಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಜಯಮಹಲ್ ಬಡಾವಣೆಯಲ್ಲಿ ಜರುಗಿದೆ.
ಪತಿರಾಯನ ಪರಸ್ತ್ರೀಯ ಅನೈತಿಕ ಸಂಬಂಧ ಪ್ರಶ್ನಿಸಿದಕ್ಕೆ ಪತ್ನಿ ಜಯಂತಿ ಕೊಲೆಯಾಗಿದ್ದಾಳೆ.
ವಿಜಯಪುರ ಪಟ್ಟಣದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಓರ್ವ ಮಹಿಳೆಯ ಜೊತೆ ಗಂಡ ಲಕ್ಷ್ಮೀಪತಿಗೆ ಪರಿಚಯವಾಗಿದ್ದು ಆಕೆಯ ಜೊತೆ ಅನೈತಿಕ ಸಂಬಂಧವಿಟ್ಟು ಕೊಂಡಿದನ್ನು ಪತ್ನಿ ಜಯಂತಿ ಪ್ರಶ್ನಿಸಿದಕ್ಕೆ ಸಾವುನ ಮನೆ ಸೇರಬೇಕಾಗಿದೆ.