i
ತಾಳ್ಯ ಗ್ರಾಮದ ನಿವಾಸಿ ಶ್ವೇತಾ ರುದ್ರಸ್ವಾಮಿ ಕಣ್ಮರೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: Women missing
ಹೊಳಲ್ಕೆರೆ ತಾಲ್ಲೂಕಿನ ತಾಳ್ಯ ಗ್ರಾಮದ ನಿವಾಸಿ ಶ್ವೇತಾ (28ವರ್ಷ) ತಂದೆ ರುದ್ರಸ್ವಾಮಿ ಎಂಬ ಮಹಿಳೆ 2023ರ ಮಾರ್ಚ್ 07 ರಂದು ಕಾಣೆಯಾಗಿರುವ ಪ್ರಕರಣ ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕಾಣೆಯಾದ ಮಹಿಳೆ ಚಹರೆ ವಿವರ ಇಂತಿದೆ. ಶ್ವೇತಾ (28ವರ್ಷ) ತಂದೆ ರುದ್ರಸ್ವಾಮಿ, ಎ.ಕೆ ಜನಾಂಗ, 4.8 ಅಡಿ ಎತ್ತರ, ಧೃಡವಾದ ಮೈಕಟ್ಟು, ಕೋಲು ಮುಖ, ಎಣ್ಣೆಗೆಂಪು ಮೈಬಣ್ಣ, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಕೆಂಪು ಬಣ್ಣದ ನೈಟಿ ಧರಿಸಿರುತ್ತಾರೆ.
ಈ ಮೇಲ್ಕಂಡ ಚಹರೆಯ ವಿವರವುಳ್ಳ ಮಹಿಳೆಯ ಕುರಿತು ಮಾಹಿತಿ ದೊರೆತ ಕೂಡಲೆ ದೂರವಾಣಿ ಸಂಖ್ಯೆ 9480803165 ಗೆ ಸಂರ್ಪಕಿಸಬೇಕು ಎಂದು ಹೊಳಲ್ಕೆರೆ ತಾಲ್ಲೂಕು ಚಿತ್ರಹಳ್ಳಿ ಗೇಟ್ ಪೆÇಲೀಸ್ ಠಾಣೆ ಠಾಣಾಧಿಕಾರಿ ತಿಳಿಸಿದ್ದಾರೆ.