
ಮಕ್ಕಳು ಹಿರಿಯರಿಗೆ ಗೌರವ ನೀಡುವುದು ಸೇರಿದಂತೆ ಬದುಕಿನ ಮಾರ್ಗ ಕಲಿಸುವ ಶಿಬಿರಕ್ಕೆ ಮಕ್ಕಳನ್ನ ಸೇರಿಸಿ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಮಕ್ಕಳು ಮನೆಯ ತಂದೆ ತಾಯಿ, ಹಿರಿಯರಿಗೆ ಗೌರವ ನೀಡುತ್ತಿಲ್ಲವೇ, ಮನೆ ಮಂದಿಯೊಂದಿಗೆ ಜಗಳ ಕಾಯುತ್ತಾರಾ, ಕೃಷಿ, ಹೈನುಗಾರಿಕೆ ತೋಟಗಾರಿಕೆ ಕುರಿತು ಆಸಕ್ತಿ ಇದೆಯೋ ಇಲ್ಲವೋ ಇತ್ಯಾದಿಗಳನ್ನು ತಿಳಿಸಲು ತಂದೆ, ತಾಯಿ, ಸಹೋದರ-ಸಹೋದರು ಸೇರಿದಂತೆ ಗುರು ಹಿರಿಯರಿಗೆ ಗೌರವ ನೀಡುವುದನ್ನು ಕೇವಲ 12 ದಿನದ ವಿಶೇಷ ಶಿಬಿರದಲ್ಲಿ ತಮ್ಮ ಮಕ್ಕಳಿಗೆ ಹೇಳಿ ಕೊಡಲಾಗುತ್ತದೆ. ಇದಲ್ಲದೆ ಅತಿ ಮುಖ್ಯವಾಗಿ ಬದುಕಿನ ಮಾರ್ಗ ಕಲಿಸುವ ಶಿಬಿರಕ್ಕೆ ಮಕ್ಕಳನ್ನ ಇಂದೇ ಸೇರಿಸಿ ಜೀವನದ ಲಾಭ ಪಡೆಯಿರಿ.
ಹಿರಿಯೂರು ತಾಲೂಕಿನ ಮೇಟಿಕುರ್ಕೆ ಸಮೀಪದ ಬಿ.ಟಿ.ಫಾರ್ಮ್ಸ್ ನಲ್ಲಿ ಫನ್ ಇನ್ ದ ಫಾರ್ಮ್ ಹೆಸರಿನಲ್ಲಿ ಇದೇ ಏ.16 ರಿಂದ 8 ವರ್ಷದಿಂದ 16 ವರ್ಷದೊಳಗಿನ ಮಕ್ಕಳಿಗೆ ವಿಶೇಷ ಬೇಸಿಗೆ ಶಿಬಿರ ಆಯೋಜಿಸಲಾಗಿದೆ.
ಶಿಬಿರದ ವಿಶೇಷಗಳೆಂದರೆ, 12 ದಿನಗಳು ಮಾತ್ರ ಮಕ್ಕಳಿಗಾಗಿ ಸಂಪೂರ್ಣ ಜೀವನ ಕೌಶಲ್ಯಗಳನ್ನು ಕಲಿಸಲಾಗುತ್ತದೆ. ಮಿನಿ ಟ್ರ್ಯಾಕ್ಟರ್ ಚಾಲನಾ ತರಬೇತಿ, ಪಾಕಶಾಸ್ತ್ರ, ಹುನುಗಾರಿಕೆ ತರಬೇತಿ, ಸಸಿ ನಾಟಿ ತರಬೇತಿ, ಕ್ಯಾಂಪ್ ಫೈರ್ ಮತ್ತು ಸಾಮಾಜಿಕ ಕಾಳಜಿ, ಯೋಗ, ಕ್ರೀಡೆ, ರೈನ್ ಡ್ಯಾನ್ಸ್, ಈಜು, ಛಾಯಾಚಿತ್ರಣ, ತೋಟಗಾರಿಕೆ ಕೌಶಲ್ಯ, ಗೃಹೋಪಯೋಗಿ ಕೆಲಸಗಳು, ಪ್ರಾರ್ಥಮಿಕ ತಂತ್ರಜ್ಞಾನದ ಶಿಕ್ಷಣ, ಕಂಪ್ಯೂಟರ್ ಜ್ಞಾನ ಮತ್ತು ಹಾರ್ಡ್ ವೇರ್ ಶಿಕ್ಷಣ ಕುರಿತು ವಿಶೇಷ ನುರಿತ ತಜ್ಞರಿಂದ ಮಕ್ಕಳಿಗೆ ಹೇಳಿ ಕೊಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ 85535-51787 ಮತ್ತು 97406-13519 ಇವರನ್ನು ಸಂಪರ್ಕಿಸಬಹುದಾಗಿದೆ.