i
ಮತದಾನ ಮಾಡಿದವರಿಗೆ “ಮಯೂರ ಹೋಟೆಲ್” ವಾಸ್ತವ್ಯದ ಮೇಲೆ 50 ರಷ್ಟು ರಿಯಾಯಿತಿ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರನ್ನು ಪ್ರೋತ್ಸಾಹಿಸುವ ಸಲುವಾಗಿ ಮತ ಚಲಾಯಿಸುವ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ನಿಗಮದ “ಮಯೂರ ಹೋಟೆಲ್” ವಾಸ್ತವ್ಯದ ಮೇಲೆ ಶೇಕಡ 50 ರಷ್ಟು ವಿಶೇಷ ರಿಯಾಯಿತಿ ನೀಡಲಾಗುವುದು.
ವಿಶೇಷ ರಿಯಾಯಿತಿಯನ್ನು ಪಡೆಯಲಿಚ್ಚಿಸುವಂತಹ ಸಾರ್ವಜನಿಕರು ಕಡ್ಡಾಯವಾಗಿ ಮತದಾನ ಮಾಡಿ ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿ ಹಾಗೂ ಬುಕ್ಕಿಂಗ್ಗಾಗಿ ದೂರವಾಣಿ ಸಂಖ್ಯೆ: 8970888880, 8970650070, 080-43344334/35 ನ್ನು ಹಾಗೂ ನಿಗಮದ ಜಾಲತಾಣ www.kstdc.co ಮೂಲಕ ಬುಕ್ಕಿಂಗ್ ಕೈಗೊಳ್ಳುವ ಪ್ರವಾಸಿಗರು ವೋಚರ್ ಕೋಡ್ VOTE2023 ಅನ್ನು ಬಳಸುವುದು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.