i
ಮತದಾನದ ನಂತರ ಹಳೆಯ ನೆನಪುಗಳನ್ನು ಬಿಚ್ಚಿಟ್ಟ ಮಾಜಿ ಪ್ರಧಾನಿ ದೇವೇಗೌಡರು…
ಚಂದ್ರವಳ್ಳಿ ನ್ಯೂಸ್, ಹಾಸನ:
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪತ್ನಿ ಚೆನ್ನಮ್ಮ ಅವರೊಂದಿಗೆ ತೆರಳಿ ಒಟ್ಟಿಗೆ ಮತ ಚಲಾಯಿಸಿದ್ದಾರೆ.
ಹಾಸನ ಜಿಲ್ಲೆಯ ಪಡುವಲಹಿಪ್ಪೆ ಗ್ರಾಮ ಮತಗಟ್ಟೆ ಸಂಖ್ಯೆ 251ರಲ್ಲಿ ಮತದಾನ ಮಾಡುವ ಮೂಲಕ ತಮ್ಮ ಮತ ಹಕ್ಕು ಚಲಾಯಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಪ್ರಧಾನಿ ಹಳೆಯ ನೆನಪುಗಳನ್ನು ಬಿಚ್ಚಿಟ್ಟು ಮೊದಲು ವ್ಯವಸಾಯ ಶುರು ಮಾಡಿದೆ. ನನ್ನ ಹುಟ್ಟೂರು ಹರದನಹಳ್ಳಿಯಲ್ಲಿರುವ ಆಸ್ತಿಯನ್ನೆಲ್ಲಾ ನನ್ನ ತಮ್ಮಂದಿರಿಗೆ ಮತ್ತು ಚಿಕ್ಕಪ್ಪಂದಿರಿಗೆ ವಹಿಸಿಕೊಟ್ಟೆ. ಇಲ್ಲಿ ಜಮೀನು ಖರೀದಿಸಿ ವ್ಯವಸಾಯ ಶುರು ಮಾಡಿದ್ದೆವು. ಅಂದಿನಿಂದ ಇಲ್ಲಿಯವರೆಗೆ ಇದೇ ಗ್ರಾಮದಲ್ಲಿ ಮತದಾನ ಮಾಡುತ್ತಿದ್ದೇನೆಂದು ಹಳೆಯ ದಿನಗಳನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಸ್ಮರಿಸಿದರು.
ರೇವಣ್ಣ ಆಗಿನ್ನೂ ಚಿಕ್ಕವನು. ವಿದ್ಯಾಭ್ಯಾಸ ಮಾಡುತ್ತಿದ್ದ. ಐಟಿಐ ಮಾಡಿ ಕೈಗಾರಿಕೆ ಮಾಡಬೇಕೆಂಬ ಆಸೆ ಇತ್ತು. ಆದರೆ ಅವರ ಹಣೆ ಬರಹ ಬದಲಾಗಿದೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಾನು ಜೈಲಿನಲ್ಲಿ ಇದ್ದೆ. ಆಗ ರೇವಣ್ಣ ಐಟಿಐ ಬಿಟ್ಟು ವ್ಯವಸಾಯ ಶುರು ಮಾಡಿದರು ಎಂದು ದೇವೇಗೌಡರು ಹೇಳಿದರು.