i
ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಸೃಷ್ಠಿ ಕಣ್ಮರೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ತಾಲ್ಲೂಕಿನ ಹೆಗ್ಗೆರೆ ಗ್ರಾಮದ ನಿವಾಸಿ ಸೃಷ್ಠಿ (19 ವರ್ಷ) ಎಂಬ ಯುವತಿ ಇದೇ ಮೇ.8ರಂದು ಕಾಣೆಯಾಗಿರುವ ಪ್ರಕರಣ ಚಿತ್ರದುರ್ಗ ತಾಲ್ಲೂಕು ಭರಮಸಾಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕಾಣೆಯಾದ ಯುವತಿಯ ಚಹರೆ ವಿವರ ಇಂತಿದೆ. ಸೃಷ್ಠಿ (19ವರ್ಷ) ತಂದೆ ಶಂಭುಲಿಂಗಪ್ಪ, ನಾಯಕ ಜನಾಂಗ, ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ. 5 ಅಡಿ ಎತ್ತರ, ದುಂಡು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ, ಹಸಿರು ನೀಲಿ ಬಣ್ಣ ಮಿಶ್ರಿತ ಸೀರೆ ಹಾಗೂ ನೀಲಿ ಬಣ್ಣದ ಜಾಕೀಟು ಧರಿಸಿರುತ್ತಾರೆ.
ಈ ಮೇಲ್ಕಂಡ ಚಹರೆ ವಿವರವುಳ್ಳ ಯುವತಿಯ ಕುರಿತು ಮಾಹಿತಿ ದೊರೆತ ಕೂಡಲೆ ಭರಮಸಾಗರ ಪೊಲೀಸ್ ಠಾಣೆಗೆ ಸಂಪರ್ಕಿಸಬೇಕು ಎಂದು ಚಿತ್ರದುರ್ಗ ತಾಲ್ಲೂಕು ಭರಮಸಾಗರ ಪೊಲೀಸ್ ಠಾಣೆಯ ಠಾಣಾಧಿಕಾರಿ ತಿಳಿಸಿದ್ದಾರೆ.