i
ಹಿರಿಯೂರು ಕ್ಷೇತ್ರದ ಶಾಸಕ ಸುಧಾಕರ್ ಮತ್ತು ಇತರರು ಗಳಿಸಿದ ಮತಗಳ ಸಂಪೂರ್ಣ ವಿವರ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: mla election result
ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಚಿತ್ರದುರ್ಗ ಜಿಲ್ಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ವಿಜೇತರಾಗಿದ್ದು, ಒಂದು ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯು ಜಯಗಳಿಸಿದ್ದಾರೆ.
ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಡಿ.ಸುಧಾಕರ್ 92,050 ಮತಗಳನ್ನು ಪಡೆಯುವುದರೊಂದಿಗೆ ಸಮೀಪದ ಅಭ್ಯರ್ಥಿ ಭಾರತೀಯ ಜನತಾ ಪಕ್ಷದ ಕೆ.ಪೂರ್ಣಿಮಾ ಅವರಿಗಿಂತ 30,322 ಮತಗಳ ಅಂತರದೊಂದಿಗೆ ವಿಜೇತರಾಗಿದ್ದಾರೆ. ಭಾರತೀಯ ಜನತಾ ಪಕ್ಷದ ಕೆ.ಪೂರ್ಣಿಮಾ 61,728, ಬಹುಜನ ಸಮಾಜ ಪಕ್ಷದ ಎನ್.ರಂಗಸ್ವಾಮಿ 935, ಆಮ್ ಆದ್ಮಿ ಪಕ್ಷದ ಕೆ.ಟಿ.ತಿಪ್ಪೇಸ್ವಾಮಿ 1407, ಜಾತ್ಯಾತೀತ ಜನತಾದಳ ಎಂ.ರವೀಂದ್ರಪ್ಪ 38,686, ಕರ್ನಾಟಕ ರಾಷ್ಟ್ರೀಯ ಸಮಿತಿ ಪಕ್ಷದ ವಿನಯ್.ಎಸ್ 269, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಕರ್ನಾಟಕ)ದ ಬಿ.ಪುಟ್ಟಲಿಂಗಪ್ಪ 851, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಹೆಚ್.ಮಹೇಶ್ 1520, ಉತ್ತಮ ಪ್ರಜಾಕೀಯ ಪಕ್ಷದ ಈ.ಪಾತಲಿಂಗಪ್ಪ 1103, ಪಕ್ಷೇತರ ಅಭ್ಯರ್ಥಿಗಳಾದ ರಂಗಯ್ಯ.ಎನ್ 238, ಎನ್.ಓ.ರಂಗಸ್ವಾಮಿ 219, ಬಿ.ಶಶಿಕಲ 319 ಮತಗಳನ್ನು ಪಡೆದಿದ್ದಾರೆ. 691 ನೋಟಾ ಮತಗಳು ದಾಖಲಾಗಿವೆ. 286 ಮತಗಳು ತಿರಸ್ಕೃತವಾಗಿವೆ.