i
ಗೊಲ್ಲರಹಟ್ಟಿ ಗ್ರಾಮದ ವಸಂತಮ್ಮ ಬಸವರಾಜಪ್ಪ ಕಣ್ಮರೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹೊಳಲ್ಕೆರೆ ತಾಲ್ಲೂಕಿನ ಎಸ್.ಹೆಚ್.ಹಳ್ಳಿ ಗೊಲ್ಲರಹಟ್ಟಿ ಗ್ರಾಮ ನಿವಾಸಿ ವಸಂತಮ್ಮ(36 ವರ್ಷ) ಎಂಬ ಮಹಿಳೆ ಕಾಣೆಯಾಗಿರುವ ಪ್ರಕರಣ 2021ರ ಫೆಬ್ರವರಿ 18 ರಂದು ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕಾಣೆಯಾಗಿರುವ ಮಹಿಳೆಯ ಚಹರೆ ಇಂತಿದೆ. ವಸಂತಮ್ಮ (36 ವರ್ಷ) ಗಂಡ ಬಸವರಾಜಪ್ಪ, ಸುಮಾರು 5.5 ಅಡಿ ಎತ್ತರ, ಗೊಲ್ಲ ಜನಾಂಗ, ಕೋಲು ಮುಖ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಬಣ್ಣ, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಸೀರೆ ಧರಿಸಿರುತ್ತಾರೆ.
ಈ ಮೇಲ್ಕಂಡ ಮಹಿಳೆಯ ಕುರಿತು ಮಾಹಿತಿ ತಿಳಿದು ಬಂದಲ್ಲಿ ದೂರವಾಣಿ ಸಂಖ್ಯೆ ಚಿಕ್ಕಜಾಜೂರು ಪೊಲೀಸ್ ಠಾಣೆ 08191-287533, ಹೊಳಲ್ಕೆರೆ ವೃತ್ತ ನಿರೀಕ್ಷಕರವರ ಕಚೇರಿ 08191-275376, ಚಿತ್ರದುರ್ಗ ಪೊಲೀಸ್ ಉಪಾಧೀಕ್ಷಕರ ಕಚೇರಿ 08194-222430, ಚಿತ್ರದುರ್ಗ ಜಿಲ್ಲಾ ಕಂಟ್ರೋಲ್ ರೂಂ 08194-222782 ಗೆ ಸಂಪರ್ಕಿಸಬೇಕೆಂದು ಹೊಳಲ್ಕೆರೆ ವೃತ್ತ ಪೊಲೀಸ್ ವೃತ್ತ ನಿರೀಕ್ಷಕರು ತಿಳಿಸಿದ್ದಾರೆ.