i
ಅರಸಿಕೆರೆ-ಹುಬ್ಬಳ್ಳಿ ರೈಲು ಭಾಗಶಃ ರದ್ದು….
ಚಂದ್ರವಳ್ಳಿ ನ್ಯೂಸ್, ಹುಬ್ಬಳ್ಳಿ:
ಬಾಣಾವರ ಮತ್ತು ದೇವನೂರು ನಿಲ್ದಾಣಗಳ ನಡುವೆ ರೈಲ್ವೆ ಹಳಿ ನಿರ್ವಹಣಾ ಕಾಮಗಾರಿ ನಡೆಯುತ್ತಿರುವುದರಿಂದ ರೈಲು ಸಂಖ್ಯೆ 16213 ಅರಸೀಕೆರೆ – ಎಸ್. ಎಸ್. ಎಸ್ ಹುಬ್ಬಳ್ಳಿ ಡೈಲಿ ಎಕ್ಸ್ಪ್ರೆಸ್ ರೈಲನ್ನು ಮೇ 19 ರಿಂದ 22, 2023 ರವರೆಗೆ ಅರಸೀಕೆರೆ ಮತ್ತು ಬೀರೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ ಎಂದು ಹುಬ್ಬಳ್ಳಿಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನ್ನೇಶ್ ಹೆಗ್ಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.