i
ಚಾರ್ಟೆಡ್ ಅಕೌಂಟೆಡ್ ನೇಮಕಕ್ಕೆ ದರಪಟ್ಟಿ ಆಹ್ವಾನ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಕ್ಕಳ ರಕ್ಷಣಾ ನಿರ್ದೇಶನಾಲಯ, ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿಯ ಅಂಗ ಸಂಸ್ಥೆಗಳ 2022-23ನೇ ಸಾಲಿನ ವಾರ್ಷಿಕ ಲೆಕ್ಕ ಪತ್ರಗಳನ್ನು ಟ್ಯಾಲಿ ತಂತ್ರಾಂಶದಲ್ಲಿ ನಮೂದಿಸಿ ಬ್ಯಾಲೆನ್ಸ್ ಶೀಟ್ನ್ನು ತಯಾರಿಸಿ ಆಂತರಿಕ ಲೆಕ್ಕ ಪರಿಶೋಧನೆಯ ಸಲುವಾಗಿ ಚಾರ್ಟೆಡ್ ಅಕೌಂಟೆಡ್ಗಳನ್ನು ನೇಮಕ ಮಾಡಲು ದರಪಟ್ಟಿಯನ್ನು ಆಹ್ವಾನಿಸಲಾಗಿದೆ.
ದರಪಟ್ಟಿಯನ್ನು ಮೇ 26 ರಿಂದ ಜೂನ್ 20, 2023 ರ ಅಪರಾಹ್ನ 4 ಗಂಟೆವರೆಗೆ ಮುಚ್ಚಿದ ಲಕೋಟೆಯಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯ, ವಿಶ್ವೇಶ್ವರಯ್ಯ ಕೇಂದ್ರ ಚಿಕ್ಕ ಗೋಪುರ, 3ನೇ ಮಹಡಿ, ಡಾ. ಅಂಬೇಡ್ಕರ್ ವೀದಿ, ಬೆಂಗಳೂರು-560001 ಗೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ಮಕ್ಕಳ ರಕ್ಷಣಾ ನಿರ್ದೇಶನಾಲಯದ ವೆಬ್ ಸೈಟ್ https://icps.karnataka.gov.in ನಲ್ಲಿ ಪಡೆದು ಪರಿಶೀಲಿಸುವುದು ಹಾಗೂ ನಿರ್ದೇಶಕರು, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಇವರನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಮಕ್ಕಳ ರಕ್ಷಣಾ ನಿರ್ದೇಶನಾಲಯದ ಯೋಜನಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.