i
ಬಿಪಿಎಲ್ ಮತ್ತು ಅಂತ್ಯೋದಯ ಫಲಾನುಭಗಳಿಗೆ ಇ-ಕೆವೈಸಿ ಕಡ್ಡಾಯ…
ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಯಗಳ ಕುಟುಂಬಗಳಿಗೆ ರಾಜ್ಯ ಸರ್ಕಾರ ದಿಢೀರ್ ಇ-ಕೆವೈಸಿ ಮಾಡಿಸಲು ಸೂಚನೆ ನೀಡಿದ್ದು ಇ-ಕೆವೈಸಿ ಮೂಲಕ ಅರ್ಹ ಫಲಾನುಭವಿಗಳ ಪತ್ತೆ ಸರ್ಕಾರ ಒಂದು ಹೆಜ್ಜೆ ಮುಂದಿಟ್ಟಿದೆ.
ಬಿಪಿಎಲ್ ಮತ್ತು ಅಂತ್ಯೋದಯ ಅನ್ನ ಯೋಜನೆಯ ಪಡಿತರ ಚೀಟಿಗಳಲ್ಲಿನ ಸದಸ್ಯರು ಕಡ್ಡಾಯವಾಗಿ ಇ -ಕೆವೈಸಿ ಮಾಡಿಸಲು ಆಹಾರ ಇಲಾಖೆ ಸೂಚನೆ ನೀಡಿದೆ.
ರಾಜ್ಯದ ಯಾವುದೇ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪಡಿತರ ಫಲಾನುಭವಿಗಳು(ಸದಸ್ಯರ) ಪ್ರತಿದಿನ ಬೆಳಗ್ಗೆ 7 ರಿಂದ ರಾತ್ರಿ 8 ರ ವರೆಗೆ ಇ -ಕೆವೈಸಿ ಕಾರ್ಯವನ್ನು ತುರ್ತಾಗಿ ಪೂರ್ಣಗೂಳಿಸಬೇಕು ಎಂದು ಹೇಳಲಾಗಿದೆ. ದಾವಣಗೆರೆ ತಾಲ್ಲೂಕು ತಹಶೀಲ್ದಾರ್ ಈ ಬಗ್ಗೆ ಮನವಿ ಮಾಡಿದ್ದು, ದಾವಣಗೆರೆ ತಾಲ್ಲೂಕಿನ ಗ್ರಾಮಾಂತರ ಪ್ರದೇಶದ 9356 ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ(ಬಿ.ಪಿಎಲ್) ಪಡಿತರ ಚೀಟಿಗಳಲ್ಲಿನ ಸದಸ್ಯರ ಇ-ಕೆವೈಸಿ ಬಾಕಿ ಇದ್ದು, ಪ್ರತಿದಿನ ಬೆಳಗ್ಗೆ 7 ರಿಂದ ರಾತ್ರಿ 8 ರ ವರೆಗೆ ರಾಜ್ಯದ ಯಾವುದೇ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪಡಿತರ ಫಲಾನುಭವಿಗಳು(ಸದಸ್ಯರ) ಇ-ಕೆವೈಸಿ ಕಾರ್ಯ ತುರ್ತಾಗಿ ಪೂರ್ಣಗೂಳಿಸಬೇಕು ಎಂದು ಎಚ್ಚರಿಸಿದ್ದಾರೆ.