Day: June 12, 2023

ರಾಮಗಿರಿ ಹಾಗೂ ಮಾಡದಕೆರೆಯಲ್ಲಿ 20 ಮಿ.ಮೀ ಮಳೆ… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:  ಜೂನ್ 11ರಂದು ಸುರಿದ ಮಳೆಯ ವಿವರದನ್ವಯ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ...
ತಾಳಿಕಟ್ಟೆ ರಮೇಶಪ್ಪ ಮತ್ತು ಕಟ್ಟಿಗೆಹಳ್ಳಿ ಕೆ.ಬಿ ಬಸವಂತಕುಮಾರ ಕಣ್ಮರೆ… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:  ಹೊಳಲ್ಕೆರೆ ತಾಲ್ಲೂಕಿನ ತಾಳಿಕಟ್ಟೆ ಗ್ರಾಮ ನಿವಾಸಿ ರಮೇಶಪ್ಪ (38ವರ್ಷ)...
ನಗರಸಭೆ ನೀರು ಸರಬರಾಜುದಾರ ಹನುಮಂತಪ್ಪ ನಿಧನ… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:  ಚಿತ್ರದುರ್ಗ ನಗರದ ಪಿಹೆಚ್‍ಇ ಕ್ವಾಟ್ರರ್ಸ್ ನಿವಾಸಿ, ಚಿತ್ರದುರ್ಗ ನಗರಸಭೆಯ ನೀರು ಸರಬರಾಜು...
ಚಿತ್ರದುರ್ಗ ಸಮೀಪ ಭೀಕರ ರಸ್ತೆ ಅಪಘಾತ, ಸ್ಥಳದಲ್ಲೇ ಇಬ್ಬರ ಸಾವು… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಲಾರಿಗೆ ಕಾರಿನ ಮಧ್ಯ ನಡೆದ ಭೀಕರ ರಸ್ತೆ...
ಜೆಡಿಎಸ್ ವಿಸರ್ಜಿಸುವ ಕೆಲಸ ಏನಾಯ್ತು- ಸಚಿವ ಕೆ ಎನ್ ರಾಜಣ್ಣ… ಚಂದ್ರವಳ್ಳಿ ನ್ಯೂಸ್, ಹಾಸನ:  ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು...
ಬಿಜೆಪಿ ಜೆಡಿಎಸ್ ಮೈತ್ರಿ ಬಗ್ಗೆ ನನಗೆ ಗೊತ್ತಿಲ್ಲ-ಹೆಚ್.ಡಿ.ರೇವಣ್ಣ… ಚಂದ್ರವಳ್ಳಿ ನ್ಯೂಸ್, ಸುಬ್ರಹ್ಮಣ್ಯ: ದೆಹಲಿಯಲ್ಲಿ ಬಿಜೆಪಿ ಜೊತೆ ದೇವೇಗೌಡರು ಮೈತ್ರಿ ಮಾತುಕತೆ ನಡೆಸಿರುವ ಕುರಿತು...
ರೈಲು ದುರಂತ, ಅಂದು ಇಂದು ಮುಂದು… ಚಂದ್ರವಳ್ಳಿ ನ್ಯೂಸ್, ಬೆಂಗಳೂರು:  ಒರಿಸ್ಸಾದ ರೈಲು ದುರಂತ, ಅಂದು ಇಂದು ಮುಂದು……….. ಜಗತ್ತನ್ನು ಸದಾ ಕಾಡುವ...
ಪ್ರತಿನಿತ್ಯ 41.85 ಸಾವಿರಕ್ಕೂ ಅಧಿಕ ಮಹಿಳೆಯರು ಉಚಿತಪ್ರಯಾಣ… ಚಂದ್ರವಳ್ಳಿನ್ಯೂಸ್,ಬೆಂಗಳೂರು: ಸರಕಾರಿ ಸಂಸ್ಥೆಗಳ ಸಾರಿಗೆ ಬಸ್‌ಗಳಲ್ಲಿ ಪ್ರತಿನಿತ್ಯ ಸುಮಾರು 41.85 ಸಾವಿರಕ್ಕೂ ಅಧಿಕ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ. ಶಕ್ತಿ ಯೋಜನೆಯು ಈ ಎಲ್ಲ ಮಹಿಳೆಯರಿಗೆ ವರದಾನವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ವಿಧಾನಸೌಧದದ ಸಮ್ಮೇಳನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು,ದುಡಿಯುವ ಮಹಿಳೆಯರ ಉತ್ಸಾಹ ಹೆಚ್ಚಿಸಲಿದೆ. ಬಡ ಜನರಿಗೆ ನೀಡುವ ಅರ್ಥಿಕ ನೆರವು ನಾಡಿನ ಒಟ್ಟು ಅರ್ಥಿಕತೆಯ ವಿಕಸನಕ್ಕೆ ಕಾರಣವಾಗಲಿದೆ ಎಂಬ ಉದ್ದೇಶದಿಂದ ಈ ಯೋಜನೆ ಅನುಷ್ಠಾನ ಮಾಡಲಾಗಿದೆ ಎಂದರು. ವಿದ್ಯುತ್ ದರ ಏರಿಕೆ ವಿಷಯದಲ್ಲಿ ಪ್ರತಿಪಕ್ಷಗಳು ಅನಗತ್ಯವಾಗಿ ಗೊಂದಲ ಸೃಷ್ಟಿ ಮಾಡುತ್ತಿದ್ದೇವೆ. ದರ ಏರಿಕೆ ನಿರ್ಧಾರವು ಈ ಹಿಂದೆಯೇ ಆಗಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ(ಕೆಇಆರ್‌ಸಿ) ಸ್ವಾಯತ್ತತಾ ಸಂಸ್ಥೆಯಾಗಿದ್ದು, ಪ್ರತಿ ವರ್ಷ ವಿದ್ಯುತ್ ದರ ಪರಿಷ್ಕರಣೆ ಮಾಡುತ್ತದೆ. ಮೇ 12ರಿಂದ ಪರಿಷ್ಕೃತ ವಿದ್ಯುತ್ ದರ ಜಾರಿಗೆ ಬರಲು ಏ.1ರಂದು ಕೆಇಆರ್‌ಸಿ ಆದೇಶ ಹೊರಡಿಸಿತ್ತು ಎಂದರು.
ಬಡವರ ಜೇಬಿಗೆ ಆರ್ಥಿಕ ಶಕ್ತಿ ತುಂಬಿಸುವುದೇ ಸರಕಾರದ ಧ್ಯೇಯ: ಸಿದ್ದರಾಮಯ್ಯ…  ಚಂದ್ರವಳ್ಳಿನ್ಯೂಸ್,ಬೆಂಗಳೂರು: ಸರಕಾರದ ಮಹತ್ವಾಕಾಂಕ್ಷಿ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ರಾಜ್ಯಾದ್ಯಂತ ಮಹಿಳೆಯರ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ‘ಶಕ್ತಿ’ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದದ ಪೂರ್ವದ್ವಾರ(ಗ್ರಾಂಡ್‌ಪ್ಸ್)ದ ಬಳಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸಹ ಶಕ್ತಿ ಯೋಜನೆಗೆ ಚಾಲನೆ ನೀಡಿದರು. ಈ ಯೋಜನೆ ಜಾರಿಗೊಳಿಸುವುದರ ಮೂಲಕ ಮಹಿಳಾ ಸಬಲೀಕರಣದತ್ತ ಸರಕಾರ ದಿಟ್ಟ ಹೆಜ್ಜೆ ಇರಿಸಿದೆ. ಸಾಮಾಜಿಕ, ಆರ್ಥಿಕವಾಗಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಶತಶತಮಾನಗಳಿಂದ ಅವಕಾಶ ವಂಚಿತರಾಗಿದ್ದ ಮಹಿಳೆಯರಿಗೆ ಈ ಮೂಲಕ ಶಕ್ತಿ ತುಂಬುವ ಮತ್ತು ಅವರ ಕನಸುಗಳಿಗೆ ಪ್ರೋತ್ಸಾಹಿಸುವ ಕೆಲಸವನ್ನು ಸರಕಾರ ಮಾಡಿದೆ. ವಿನೂತನ ‘ಶಕ್ತಿ’ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶಕ್ತಿ ಇಲ್ಲದ ಅಶಕ್ತ ಜನರಿಗೆ ಶಕ್ತಿ ಕೊಡಬೇಕು ಎನ್ನುವುದು ನಮ್ಮ ಸರಕಾರದ ಧ್ಯೇಯ; ಶತಶತಮಾನಗಳಿಂದ ಮಹಿಳೆಯರು ಅವಕಾಶವಂಚಿತರಾಗಿದ್ದಾರೆ. ಯಾವುದೇ ಸಮಾಜ ಅಭಿವೃದ್ಧಿ ಪಥದಲ್ಲಿ ಸಾಗಲು ಪುರುಷರಷ್ಟೇ ಮಹಿಳೆಯರು ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕು. ಈ ನಿಟ್ಟಿನಲ್ಲಿ ನಮ್ಮ ಸರಕಾರ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವುದರ ಮೂಲಕ  ‘ಶಕ್ತಿ’ ತುಂಬುವ ಕೆಲಸವನ್ನು   ಮಾಡುತ್ತಿದೆ ಎಂದರು. ಶಕ್ತಿ ಯೋಜನೆಯ ಸ್ಮಾರ್ಟ್ ಕಾರ್ಡ್ ಗಳನ್ನು  3 ತಿಂಗಳೊಳಗೆ ಉಚಿತವಾಗಿ ಒದಗಿಸಲಾಗುವುದು;ಅಲ್ಲಿವರೆಗೆ ಸರಕಾರದ ಯಾವುದಾದರೊಂದು ಗುರುತಿನ ಚೀಟಿ ತೋರಿಸಿ ಉಚಿತವಾಗಿ ರಾಜ್ಯಾದ್ಯಂತ ಪ್ರಯಾಣಿಸಬಹುದಾಗಿದೆ. ಚುನಾವಣೆ ಸಂದರ್ಭದಲ್ಲಿ ನಾವು ಘೋಷಿಸಿದ 5 ಗ್ಯಾರಂಟಿಗಳ ಪೈಕಿ ನಾಲ್ಕು ಗ್ಯಾರಂಟಿಗಳು ಮಹಿಳೆಯರಿಗೆ ಮತ್ತು ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದವುಗಳಾಗಿವೆ. ಈ ಒಟ್ಟು 5 ಗ್ಯಾರಂಟಿಗಳ ಅನುಷ್ಠಾನಕ್ಕೆ ಒಟ್ಟು 59 ಸಾವಿರ ಕೋಟಿ ರೂ.ಗಳ ಅಗತ್ಯವಿದ್ದು, ಎಷ್ಟೇ ಕಷ್ಟ ಬರಲಿ ಐದು ಗ್ಯಾರಂಟಿಗಳನ್ನು ಈಡೇರಿಸುತ್ತೇವೆ. ಈ ಯೋಜನೆಗಳಲ್ಲಿ ಯಾವ ಮಧ್ಯವರ್ತಿಗಳಿಲ್ಲ ಎಂದರು. ಭಾರತದಲ್ಲಿ ಶೇ.24ರಷ್ಟು ಮಹಿಳೆಯರು ಸಾರ್ವಜನಿಕ ಕ್ಷೇತ್ರದಲ್ಲಿ ಭಾಗಿ: 2022ರ ವಿಶ್ವಬ್ಯಾಂಕ್‌ನ ಅಂಕಿ ಅಂಶಗಳಂತೆ ಅಮೆರಿಕಾದಲ್ಲಿ ಶೇ.57ರಷ್ಟು,ಚೀನಾದಲ್ಲಿ ಶೇ.54ರಷ್ಟು, ಆಸ್ಟೇಲಿಯಾದಲ್ಲಿ ಶೇ.65,ಇಂಡೋನೇಷಿಯಾದಲ್ಲಿ ಶೇ.53ರಷ್ಟು ಹಾಗೂ ನಮ್ಮ ದೇಶದ ಪಕ್ಕದ ಬಾಂಗ್ಲಾದೇಶದಲ್ಲಿ ಶೇ.38ರಷ್ಟು ಮಹಿಳೆಯರು ಸಾರ್ವಜನಿಕ ಕ್ಷೇತ್ರದಲ್ಲಿ ಭಾಗಿಯಾಗುತ್ತಿದ್ದು, ಭಾರತದಲ್ಲಿ ಶೇ.24ರಷ್ಟು ಮಹಿಳೆಯರು ಮಾತ್ರ ಪಾಲ್ಗೊಳ್ಳುತ್ತಿದ್ದಾರೆ ಎಂದು ತಿಳಿಸಿದ ಸಿಎಂ ಸಿದ್ದರಾಮಯ್ಯ ಅವರು ಈ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಅವರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಈ ಶಕ್ತಿ ಯೋಜನೆ ಜಾರಿಗೆ ತರಲಾಗಿದೆ ಎಂದರು. ಎಷ್ಟು ಹಣ ಖರ್ಚು ಮಾಡುತ್ತಾ ಇದ್ದೀವಿ ಎನ್ನುವುದು ಮುಖ್ಯವಲ್ಲ;ಯಾರಿಗೆ ಕೊಡ್ತಾ ಇದ್ದೇವೆ ಎನ್ನುವುದು ಮುಖ್ಯ ಎಂದು ಹೇಳಿದ ಸಿಎಂ ಸಿದ್ದರಾಮಯ್ಯ ಅವರು ಗೃಹಜ್ಯೋತಿ ಯೋಜನೆ,ಅನ್ನಭಾಗ್ಯ ಯೋಜನೆ ಜುಲೈ 1ರಿಂದ ಜಾರಿಗೊಳಿಸಲಾಗುತ್ತದೆ. ಗೃಹಲಕ್ಷ್ಮೀ  ಯೋಜನೆ ಆಗಸ್ಟ್ 16ರಂದು ಜಾರಿಗೊಳಿಸಲಾಗುತ್ತದೆ ಮತ್ತು ಯುವನಿಧಿಗೆ ಅರ್ಜಿ ಆಹ್ವಾನಿಸಲಾಗುತ್ತದೆ ಎಂದರು. 10 ಕೆ.ಜಿ ಆಹಾರಧಾನ್ಯವನ್ನು ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ದಾರರಿಗೆ ನೀಡುತ್ತೇವೆ;ಇದಕ್ಕೆ ರಾಜ್ಯದಲ್ಲಿ 10100 ಕೋಟಿ ರೂ. ಖರ್ಚಾಗಲಿದೆ. ಯಾರು ಕೂಡ ಹಸಿವಿನಿಂದ ಬಳಲಬಾರದು;ಹಸಿವು ಮುಕ್ತ ರಾಜ್ಯ ನಮ್ಮದಾಗಬೇಕು ಎಂಬ ಸದಾಶಯ ಇದರ ಹಿಂದಿದೆ ಎಂದರು. ಗೇಲಿ,ಕುಹಕ ಮಾಡುವವರು ಮಾಡಲಿ;ಡೊಂಟ್ ಕೇರ್: ರೈತರ ಸಾಲಮನ್ನಾ ಮಾಡದೇ ಬಂಡವಾಳಶಾಹಿಗಳ ಸಾಲಮನ್ನಾ ಮಾಡುವವರು ಸರಕಾರ ಯಾವ ರೀತಿ ಕಾರ್ಯನಿರ್ವಹಿಸುತ್ತದೇ ಎಂಬುದರ ಕುರಿತು ಪರಿಜ್ಞಾನವಿಲ್ಲದೇ ತರ್ಕರಹಿತವಾಗಿ ಎಡಬಿಡಂಗಿತನದ ರೂಪದಲ್ಲಿ ವಿರೋಧಪಕ್ಷಗಳು ಮಾತನಾಡುತ್ತಿದ್ದು, ಅವುಗಳಿಗೆ ಸೊಪ್ಪು ಹಾಕದೇ ಮತ್ತು ವಿಚಲಿತರಾಗದೇ ಎಲ್ಲ ಜಾತಿಯಲ್ಲಿರುವ, ಎಲ್ಲ ಧರ್ಮದಲ್ಲಿರುವ ಬಡವರಿಗೆ,ಸಾಮಾಜಿಕವಾಗಿ,ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದರು....