ಫಿಜಿಯೋಥೆರಪಿಸ್ಟ್, ಆಯಾ ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ… ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಸಮನ್ವಯ ಶಿಕ್ಷಣ ಯೋಜನೆಯಡಿ ಗೃಹ ಮತ್ತು ಶಾಲಾಧರಿತ ಶಿಕ್ಷಣ ಪಡೆಯುತ್ತಿರುವ ಶಾಲಾ ವಿದ್ಯಾರ್ಥಿಗಳಿಗೆ ತಾಲ್ಲೂಕು ಸಮನ್ವಯ ಶಿಕ್ಷಣ ಕೇಂದ್ರದಲ್ಲಿ ಫಿಜಿಯೋಥೆರಪಿ ಸೇವೆಯನ್ನು ಒದಗಿಸಲು ತಾತ್ಕಾಲಿಕವಾಗಿ ಫಿಜಿಯೋಥೆರಪಿಸ್ಟ್, ಆಯಾ ಮತ್ತು ಸಹಾಯಕಿಯರನ್ನು ನೇಮಿಸಿ ಅರ್ಜಿಯನ್ನು ಆಹ್ವಾನಿಸಿದ್ದು, ಜುಲೈ ೨೭ರಂದು ಅರ್ಜಿಯನ್ನು ಬಿಎಂ ಸರ್ಕಾರಿ ಪ್ರೌಢಶಾಲಾ ಹಿಂಭಾಗದ ಬಿಆರ್ಸಿ ಕಚೇರಿಗೆ ತಲುಸಲು ಸೂಚನೆ ನೀಡಲಾಗಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ಸಂಬಂಧಪಟ್ಟ ಎಲ್ಲಾ ದಾಖಲಾತಿಗಳೊಂದಿಗೆ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬೇಕು. ತಡವಾಗಿ ಬಂದ ಅರ್ಜಿಗಳನ್ನು ತಿಸ್ಕರಿಸಲಾಗುವುದು. ಪಿಜಿಯೋಥೆರಪಿಸ್ಟ್ಗೆ ಡಿಪಿಟಿ, ಬಿಪಿಡಿ ತರಬೇತಿ ಪಡೆದವರು, ಆಯಾ ಮತ್ತು ಸಹಾಯಕಿಯರಿಗೆ ಎಸ್ಎಸ್ಎಲ್ಸಿ ಉತ್ತರ್ಣರಾದವರು ಅರ್ಜಿ ಸಲ್ಲಿಸಬಹುದಾಗಿದೆ.