i
ಬೆಲೆ ಇಳಿಕೆಯತ್ತ ಟೊಮೆಟೋ, ರೈತರಲ್ಲಿ ಆತಂಕ, ಗ್ರಾಹಕರಲ್ಲಿ ಕೊಂಚ ನೆಮ್ಮದಿ…
ಚಂದ್ರವಳ್ಳಿ ನ್ಯೂಸ್, ಕೋಲಾರ:
ಕೋಲಾರ ಜಿಲ್ಲೆ ಸೇರಿದಂತೆ ರಾಜ್ಯದ ಇತರೆ ಜಿಲ್ಲೆಗಳ ರೈತರ ಪಾಲಿಗೆ ಟೊಮೆಟೋ ಜೂಜಾಟದ ಬೆಳೆಯಾಗಿ ಪರಿಣಮಿಸಿದೆ. ಬೆಳೆ ಇದ್ದರೆ ಬೆಲೆ ಇರಲ್ಲ, ಬೆಲೆ ಇದ್ದಾಗ ಬೆಳೆ ಬರಲ್ಲ ಇದು ಟೊಮೆಟೋ ಬೆಳೆಗಾರರ ಸ್ಥಿತಿ. ಟೊಮೆಟೋಗೆ ಇಂದು ಸಿಕ್ಕ ಬೆಲೆ ನಾಳೆ ಸಿಗಲ್ಲ, ಇದು ರೈತರ ಪರಿಸ್ಥಿತಿಯಾದರೆ ಗ್ರಾಹಕರು ದರ ಇಳಿದಾಗ ಫುಲ್ ಖುಷಿಯಾಗಿದ್ದರೆ, ದರ ಏರಿದಾಗ ಹುಣಸೆಹಣ್ಣಿನ ಕಡೆ ಮುಖ ಮಾಡುತ್ತಾರೆ.
ಕಳೆದ 2 ತಿಂಗಳಿನಿಂದ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೋ ಬೆಲೆ ಭಾರೀ ಏರಿಕೆಯಲ್ಲಿ ಹರಾಜಾಗುತ್ತಿತ್ತು. ಕಳೆದ ನಾಲ್ಕು ದಿನಗಳಿಂದ ಬೆಲೆ ಕುಸಿಯುವ ಮೂಲಕ ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಸರಾಸರಿ 15 ಕೆಜಿಯ ಟೊಮೆಟೋ ಬಾಕ್ಸ್ ಬೆಲೆ ಕೇವಲ 1,500 ರೂಪಾಯಿಗೆ ಅಂದ್ರೆ ಅತಿ ಹೆಚ್ಚು ಗುಣಮಟ್ಟ ಇರುವ ಟೊಮೆಟೋ ಬಿಕರಿಯಾಗಿದೆ. ಆ ಮೂಲಕ ಟೊಮೆಟೋ ಬೆಳೆ ನಿನ್ನೆ-ಮೊನ್ನೆ ಬೆಲೆಗೆ ಹೋಲಿಕೆ ಮಾಡಿದರೆ 900 ರಿಂದ 1000 ರೂಪಾಯಿ ಕಡಿಮೆಯಾಗಿದೆ. ಸದ್ಯ ಕೋಲಾರ ಎಪಿಎಂಸಿ ಮಾರುಕಟ್ಟೆಗೆ ತಮಿಳುನಾಡು, ಆಂಧ್ರಪ್ರದೇಶದಿಂದಲೂ ಟೊಮೆಟೋ ಬರುತ್ತಿದ್ದು, ಬೆಲೆ ಇಳಿ ಮುಖವಾಗುತ್ತಿದ್ದು ಇದರಿಂದ ರೈತರಲ್ಲಿ ಆತಂಕ, ಗ್ರಾಹಕರಲ್ಲಿ ಸುತು ನೆಮ್ಮದಿ ಕಂಡು ಬರುತ್ತಿದೆ.