i
ಅಶ್ವಿನಿ ಮತ್ತು ಸುಧಾ ಎನ್ನುವ ಇಬ್ಬರು ಯುವತಿಯರು ಕಣ್ಮರೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ತಾಲ್ಲೂಕಿನ ಬೊಮ್ಮವ್ವನಾಗ್ತಿಹಳ್ಳಿ ಗ್ರಾಮದ ಸಿ.ಸುಧಾ(27) ಗಂಡ ಓಂಕಾರಪ್ಪ ಹಾಗೂ ಎಮ್ಮೆಹಟ್ಟಿ ಗ್ರಾಮದ ಈ. ಅಶ್ವಿನಿ (23) ತಂದೆ ಈರಾಳಪ್ಪ ಕಾಣೆಯಾದ ಕುರಿತು ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.
ಫೆಬ್ರವರಿ 17 ರಂದು ಕಾಣೆಯಾದ ಸಿ.ಸುಧಾ 5.2 ಅಡಿ ಎತ್ತರ, ದುಂಡು ಮುಖ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದ ಸಮಯದಲ್ಲಿ ತಿಳಿ ನೀಲಿ ಬಣ್ಣದ ಟಾಪ್ ಮತ್ತು ನೀಲಿ ಬಣ್ಣದ ಪ್ಯಾಂಟ್ ಧರಿಸಿರುತಾರೆ.
ಜೂನ್ 27 ರಂದು ಕಾಣೆಯಾದ ಈ.ಅಶ್ವಿನಿ 5.5 ಅಡಿ ಎತ್ತರ, ದುಂಡು ಮುಖ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿರುತ್ತಾರೆ, ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದ ಸಮಯದಲ್ಲಿ ತಿಳಿ ಹಳದಿ ಬಣ್ಣದ ಚೂಡಿದಾರ ಧರಿಸಿರುತಾರೆ.
ಈ ಮೇಲ್ಕಂಡ ಯುವತಿಯರ ಮಾಹಿತಿ ತಿಳಿದು ಬಂದಲ್ಲಿ ಭರಮಸಾಗರ ಪೊಲೀಸ್ ಠಾಣೆಗೆ ಸಂಪರ್ಕಿಸಬೇಕು ಎಂದು ಭರಮಸಾಗರ ಪೊಲೀಸ್ ಠಾಣೆಯ ಠಾಣಾಧಿಕಾರಿ ತಿಳಿಸಿದ್ದಾರೆ.