i
ಉತ್ತಮ ಮಳೆ, ವಿವಿ ಸಾಗರಕ್ಕೆ ಸಾವಿರ ಕ್ಯೂಸೆಕ್ ನೀರಿನ ಒಳ ಹರಿವು ಆರಂಭ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ವಿವಿ ಸಾಗರ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಬೀಳುತ್ತಿದ್ದು ವಿವಿ ಸಾಗರಕ್ಕೆ ಗುರುವಾರ ಬೆಳಿಗ್ಗೆ 8 ಗಂಟೆ ವೇಳೆಗೆ 1098 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇಂದಿನ ನೀರಿನ ಮಟ್ಟ 120.10 ಅಡಿ ಇದೆ.
ವಿವಿ ಸಾಗರಕ್ಕೆ ನೀರಿನ ಒಳ ಹರಿವು ಬುಧವಾರದಿಂದ ಆರಂಭವಾಗಿದೆ. ಪ್ರಸಕ್ತ ಸಾಲಿನಲ್ಲಿ ಈಗ ಮಾತ್ರ ನೀರಿನ ಒಳ ಹರಿವು ಆರಂಭವಾಗಿದೆ.
ಚಿತ್ರದುರ್ಗ ಜಿಲ್ಲೆಯಾದ್ಯಂತ ಉತ್ತಮ ಮಳೆ ಬೀಳುತ್ತಿದ್ದು ವಾಣಿ ವಿಲಾಸ ಸಾಗರದಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲಾಗುತ್ತಿದೆ. ಸಾಕಷ್ಟು ಮಳೆ ಬೀಳುತ್ತಿರುವುದರಿಂದ ರೈತರಿಗೆ ನೀರಿನ ಅಗತ್ಯತೆ ಬೀಳುವುದಿಲ್ಲ, ಹಾಗಾಗಿ ಜಿಲ್ಲಾಧಿಕಾರಿಗಳು ಮತ್ತು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಇತ್ತ ಗಮನ ನೀಡಿ ಕೂಡಲೇ ವಿವಿ ಸಾಗರದಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುವುದನ್ನು ಬಂದ್ ಅಥವಾ ಸ್ಥಗಿತ ಮಾಡಬೇಕಾಗಿದೆ. ಈಗ ನೀರನ್ನು ಉಳಿಸಿಕೊಂಡಲ್ಲಿ ಬೇಸಿಗೆಯಲ್ಲಿ ಒಂದು ಅಥವಾ ಎರಡು ನೀರು ಹರಿಸಲು ಅನುಕೂಲವಾಗಲಿದೆ.
ಇಂದಿನ ನೀರಿನ ಮಾಹಿತಿ-
V.V.Sagar water details:As on 09.11.2023 @ 8.00AM1)Dam FRL level- 130.00ft2)Dam FRL level(wrt MSL) — 2140.00ft3)Total storage capacity of dam — 30.422TMC4)Inflow obtained – 1098 Cusecs5) Outflow- 500 cusecs6)Evaporation-100 cusecs7) Drinking – 13 cusecs8)Dam dead storage level-60.00ft(2010.00ft)9)Dam dead storage capacity –1.87 TMC10)Present water storage level —120.10ft11) Live storage – 20.48 TMC12)Gross storage – 1.87+20.48=22.35TMCDetails as on 09.11.20221)Water storage level-131.40ft2)water gross storage at FRL-30.422 TMC3)water live storage at FRL- 28.552TMC