i
ಮಾಜಿ ಸಚಿವ ಜಿ ಹೆಚ್ ಅಶ್ವತ್ಥ್ ರೆಡ್ಡಿ ಅವರ ಪತ್ನಿ ತಿಪ್ಪಮ್ಮ ಇನ್ನಿಲ್ಲ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ದಿವಂಗತ ಮಾಜಿ ಸಚಿವರಾದ ಜಿ ಹೆಚ್ ಅಶ್ವತ್ಥ್ ರೆಡ್ಡಿ ಯವರ ಧರ್ಮಪತ್ನಿ ತಿಪ್ಪಮ್ಮ(84)ನವರು ಗುರುವಾರ ನಿಧನರಾಗಿದ್ದಾರೆ.
ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.
ಅಂತ್ಯ ಸಂಸ್ಕಾರ- ನಗರದ ಬಿಡಿ ರಸ್ತೆಯ ಜಿಹೆಚ್ ಆರ್ ಜಿನ್ನಿಂಗ್ ಮಿಲ್ ಆವರಣದಲ್ಲಿ ನವೆಂಬರ್-10ರ ಶುಕ್ರವಾರ ಮಧ್ಯಾಹ್ನ 2ಗಂಟೆಗೆ ಅಂತ್ಯಕ್ರಿಯೆ ಮಾಡಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.