i
ಸುಳ್ಳು ಗ್ಯಾರಂಟಿಗಳ ಮಂಕುಬೂದಿ ಎರಚುತ್ತಿರುವ ಕಾಂಗ್ರೆಸ್-ಕುಮಾರಸ್ವಾಮಿ ಆರೋಪ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ 5 ಗ್ಯಾರಂಟಿಗಳನ್ನು ಘೋಷಿಸಿ ಅನುಷ್ಠಾನ ಮಾಡುವಲ್ಲಿ ವಿಫಲವಾಗಿದ್ದು ಈಗ ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸುಳ್ಳು ಗ್ಯಾರಂಟಿಗಳ ಮಂಕುಬೂದಿ ಎರಚುತ್ತಿದೆ ಎಂದು ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.
ರಾಜ್ಯದಲ್ಲಿ ಜಾರಿ ಆಗಿರುವ 5 ಗ್ಯಾರಂಟಿಗಳ ವೈಫಲ್ಯಗಳ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರಕಾರ 5 ಗ್ಯಾರಂಟಿ ಜಾರಿ ಮಾಡುವಲ್ಲಿ ವಿಫಲವಾಗಿದೆ. ಈಗ ಪಂಚರಾಜ್ಯಗಳ ಜನರಿಗೆ ಸುಳ್ಳು ಗ್ಯಾರಂಟಿಗಳ ಮಂಕುಬೂದಿ ಎರಚುತ್ತಿದೆ ಕಾಂಗ್ರೆಸ್.ತೆಲಂಗಾಣದ ಜನರು ಈ ಪೊಳ್ಳು ಗ್ಯಾರಂಟಿಗಳಿಗೆ ಮರುಳಾಗಬಾರದು ಎಂದು ಅವರು ಮನವಿ ಮಾಡಿದರು.ಶಕ್ತಿ ಯೋಜನೆಗೆ ಅಗತ್ಯ ಬಸ್ಸುಗಳಿಲ್ಲ, ಜೆಸಿಬಿಗಳಲ್ಲಿ ಶಾಲಾ ಮಕ್ಕಳ ಪ್ರಯಾಣ ಮಾಡುವ ದುಸ್ಥಿತಿ ಬಂದಿದೆ.ಗೃಹಜ್ಯೋತಿ ಯೋಜನೆಯಲ್ಲಿ ಮಹಾದೇವಪ್ಪ ನಿಂಗೂಕತ್ತಲು ಫ್ರೀ! ನಂಗೂ ಕತ್ತಲು ಫ್ರೀ!! ಕಾಕಾ ಪಾಟೀಲ್, ನಿಂಗೂ ಕತ್ತಲು ಫ್ರೀ!! ಎಂದು ಕುಮಾರಸ್ವಾಮಿ ವ್ಯಂಗ್ಯ ಮಾಡಿದ್ದಾರೆ.*ಗೃಹಲಕ್ಷ್ಮೀ ಯೋಜನೆ ಅನುಷ್ಠಾನಕ್ಕೆ ಸದಾ ಸರ್ವರ್ಸಮಸ್ಯೆ!, ಅಕ್ಕಿಭಾಗ್ಯಕ್ಕೆ ಅಕ್ಕಿಗೆ ನೂರೆಂಟು ವಿಘ್ನ!, ಯುವನಿಧಿ ಯೋಜನೆ ಜಾರಿಗೆ ಬಾಲಗ್ರಹಪೀಡಿತ! ವಾಗಿದೆ. ಒಟ್ಟಾರೆ 5 ಗ್ಯಾರಂಟಿಗಳ ಅನುಷ್ಠಾನದಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕುಮಾರಸ್ವಾಮಿ ದೂರಿದರು.