i
ವಿವಿಧ ಕೋರ್ಸ್ ಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿರುವ ಸ್ನಾತಕೋತ್ತರ ವಿಭಾಗ,/ ಸ್ನಾತಕೋತ್ತರ ಕೇಂದ್ರ, ರಾಮನಗರ ಹಾಗೂ ಸಂಯೋಜಿತ ಕಾಲೇಜುಗಳಲ್ಲಿ, ಸ್ನಾತಕೋತ್ತರ ಕೋರ್ಸುಗಳ ಪ್ರವೇಶಕ್ಕೆ 2023-24ನೇ ಶೈಕ್ಷಣಿಕ ಸಾಲಿಗೆ ಅರ್ಜಿಗಳನ್ನು ಯುಯುಸಿಎಂಎಸ್ ಆನ್ಲೈನ್ ಪೋರ್ಟಲ್ https://uucms.karnataka.gov.in/Login/Index ಮುಖಾಂತರ ದಂಡ ಶುಲ್ಕದೊಂದಿಗೆ ನವೆಂಬರ್ 15 ರವರೆಗೆ ವಿಸ್ತರಿಸಿದೆ.
ಬಿ.ಪಿಎಡ್ ಮತ್ತು ಮೊದಲ ಸೆಮಿಸ್ಟರ್ ಎಂ.ಎ. ಸಾಮಾಜಿಕ ಕಾರ್ಯ (ಎಂ.ಎಸ್.ಡಬ್ಲ್ಯೂ) ಕೋರ್ಸುಗಳ ಕೌಸ್ಸಿಲಿಂಗ್ ಅನ್ನು ನವೆಂಬರ್ 16 ಮತ್ತು 17 ರಂದು ನಡೆಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಬೆಂಗಳೂರು ವಿಶ್ವವಿದ್ಯಾಲಯದ ಜಾಲತಾಣ https://bangaloreuniversity.karnataka.gov.in ನಲ್ಲಿ ವೀಕ್ಷಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.