i
ಹೆಚ್ಚುವರಿ ಪಟ್ಟಿ ಹಾಗೂ ಕಟ್ಆೀಫ್ ಅಂಕಗಳ ಪಟ್ಟಿ ಪ್ರಕಟ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು: Supplementary List and Cutoff Marks List Published…
ಕರ್ನಾಟಕ ಲೋಕಸೇವಾ ಆಯೋಗವು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿನ ಮೌಲಾನಾ ಅಜಾದ್ ಮಾದರಿ ಶಾಲೆಗಳಲ್ಲಿನ ಗ್ರೂಫ್ ‘ಸಿ’ ವೃಂದದ ಕನ್ನಡ ಭಾಷಾ ಶಿಕ್ಷಕರು (ಆರ್.ಪಿ.ಸಿ-79) ಹುದ್ದೆಗಳ ನೇಮಕಾತಿಗೆ ನಿಯಮಾನುಸಾರ ಶೇಕಡ 10% ರಷ್ಟು ಹೆಚ್ಚುವರಿ ಪಟ್ಟಿಯನ್ನು ಮತ್ತು ಕಟ್ಆ ಫ್ ಅಂಕಗಳ ಪಟ್ಟಿಯನ್ನು ನವೆಂಬರ್ 09 ರಂದು ಆಯೋಗದ ಅಂತರ್ಜಾಲ http://kpsc.kar.nic.in/lists/cutoffmarks ನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಿದೆ. ಪ್ರಸ್ತುತ ನೇಮಕಾತಿ ಪ್ರಾಧಿಕಾರವು ಹೆಚ್ಚುವರಿ ಆಯ್ಕೆ ಪಟ್ಟಿಗಾಗಿ ಸಲ್ಲಿಸಿರುವ ಬೇಡಿಕೆ ಪತ್ರ / ಪ್ರಸ್ತಾವನೆಗಳಿಗನುಸಾರವಾಗಿ (ನಮೂನೆ-7) ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ನಿಯಮಾನುಸಾರ ಸಿದ್ದಪಡಿಸಲು ಕ್ರಮವಹಿಸಲಾಗುವುದು.
ಆಯೋಗವು ಸದರಿ ಹುದ್ದೆಗಳ ನೇಮಕಾತಿಗೆ ಈಗಾಗಲೇ ನವೆಂಬರ್ 09 ರಂದು ಪ್ರಕಟಿಸಲಾದ ಹೆಚ್ಚುವರಿ ಪಟ್ಟಿಯಲ್ಲಿ ಅರ್ಹರಾಗಿರುವ ಅಭ್ಯರ್ಥಿಗಳ ಪೈಕಿ ಹೆಚ್ಚುವರಿ ಆಯ್ಕೆಪಟ್ಟಿಯಲ್ಲಿ ಆಯ್ಕೆಯಾಗಲು ಇಚ್ಚಿಸದ ಅಭ್ಯರ್ಥಿಗಳು ಮಾತ್ರ ನವೆಂಬರ್ 23ರ ಒಳಗಾಗಿ ಯಾವುದಾದರೊಂದು ಮೂಲ ಗುರುತಿನ ಚೀಟಿಯೊಂದಿಗೆ ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಊದ್ಯೋಗಸೌಧ, ಬೆಂಗಳುರು ಇವರ ಸಮ್ಮುಖದಲ್ಲಿ ಖುದ್ದಾಗಿ ಹಾಜರಾಗಿ ಲಿಖಿತ ಸ್ವ-ಇಚ್ಛಾ ಹೇಳಿಕೆಯನ್ನು ಸಲ್ಲಿಸುವಂತೆ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.