i
ಮತದಾರರ ಹೆಸರು ಸೇರ್ಪಡೆ ಹಾಗೂ ತಿದ್ದಿಪಡಿಗೆ ಅವಕಾಶ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಮತದಾರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಡಿಸೆಂಬರ್ 2 ಮತ್ತು 3 ರಂದು ವಿಶೇಷ ನೊಂದಣಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಅಂದು ಎಲ್ಲಾ ಮತಗಟ್ಟೆ ಅಧಿಕಾರಿಗಳು ಆಯಾ ಮತಗಟ್ಟೆಗಳಲ್ಲಿ ಉಪಸ್ಥಿತರಿದ್ದು, ಮತದಾರರ ಪಟ್ಟಿ ಸೇರ್ಪಡೆಗೆ ಹಾಗೂ ತಿದ್ದುಪಡಿಗೆ ಸೂಕ್ತ ನಮೂನೆಗಳಲ್ಲಿ ಅರ್ಜಿಗಳನ್ನು ಸ್ವೀಕರಿಸಲಿದ್ದಾರೆ. ನಮೂನೆ 6 ರಲ್ಲಿ ಸೇರ್ಪಡೆಗೆ, ನಮೂನೆ 8 ರಲ್ಲಿ ತಿದ್ದುಪಡಿ ಹಾಗೂ ಸ್ಥಳಾಂತರ ಹಾಗೂ ನಮೂನೆ 8 ರಲ್ಲಿ ಮೃತಪಟ್ಟ ಮತದಾರರನ್ನು ಮತಪಟ್ಟಿಯಿಂದ ನಿಷ್ಕ್ರಮಣೆ ಮಾಡಲು ಅರ್ಜಿ ನೀಡಬಹುದಾಗಿದೆ.
18 ವರ್ಷ ತುಂಬಿದ ಯುವ ಮತದಾರರು ಮತಪಟ್ಟಿ ಸೇರ್ಪಡೆಗೊಳ್ಳನ್ನು ತಪ್ಪದೇ ಅರ್ಜಿ ಸಲ್ಲಿಸುವಂತೆ ಮೊಳಕಾಲ್ಮೂರು ಸಹಾಯಕ ಮತದಾರ ನೊಂದಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.