i
ಕೆಎಸ್ಆರ್ಟಿಸಿ ಸಂಸ್ಥೆ ಆರೋಗ್ಯ ವರ್ಲ್ಡ್ ಹೆಲ್ತೀ ವರ್ಕ್ ಪ್ಲೇಸ್ – 2023 ಪ್ರಶಸ್ತಿಗೆ ಭಾಜನ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಆರೋಗ್ಯ ವರ್ಲ್ಡ್ ಇಂಡಿಯಾ ಟ್ರಸ್ಟ್ ಸ್ಥಾಪಿಸಿರುವ ಹೆಲ್ತೀ ವರ್ಕ್ ಪ್ಲೇಸ್ ಪ್ರಶಸ್ತಿಯು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಅನುಷ್ಠಾನಗೊಳಿಸಿರುವ ಅತ್ಯುತ್ತಮ ಕಾರ್ಮಿಕ ಕಲ್ಯಾಣ ಉಪಕ್ರಮಕ್ಕಾಗಿ ಲಭಿಸಿರುತ್ತದೆ.
ಆರೋಗ್ಯ ವರ್ಲ್ಡ್ ಇಂಡಿಯಾ ಟ್ರಸ್ಟ್ ಸಂಸ್ಥೆಯು 2022ನೇ ಸಾಲಿನ ಪ್ರತಿಷ್ಠಿತ ಸಂಯುಕ್ತ ರಾಷ್ಟ್ರಗಳ ಪ್ರಶಸ್ತಿಯನ್ನು ಪಡೆದಿದ್ದು, ಒಂದು ರಾಷ್ಟ್ರೀಯ ಮಟ್ಟದ ಲಾಭ ರಹಿತ ಆರೋಗ್ಯ ಸಂಸ್ಥೆಯಾಗಿದೆ. ಇದು ಸಾರ್ವಜನಿಕರಿಗೆ ಆರೋಗ್ಯ ಹಾಗೂ ಜೀವನ ಶೈಲಿ ಬದಲಾವಣೆ ಬಗ್ಗೆ ಅರಿವು ಮೂಡಿಸುತ್ತಿದ್ದು, ಆರೋಗ್ಯಕರ ಜೀವನವನ್ನು ನಡೆಸಲು ಹಾಗೂ ಸಾಂಕ್ರಾಮಿಕ ರೋಗವನ್ನು ಹರಡದಂತೆ ತಡೆಯುವಲ್ಲಿ ಪರಿಣಾಮಕಾರಿಯಾಗಿ ಶ್ರಮಿಸುತ್ತಿದೆ.
ಪ್ರಶಸ್ತಿಯನ್ನು ಆರೋಗ್ಯ ವರ್ಲ್ಡ್ ಇಂಡಿಯಾ ಟ್ರಸ್ಟ್ನ ಮುಖ್ಯಸ್ಥರಾದ ಶ್ರಬಾಣಿ ಬ್ಯಾನರ್ಜಿ ಹಾಗೂ ಆರೋಗ್ಯ ವರ್ಲ್ಡ್ ಇಂಡಿಯಾ ಟ್ರಸ್ಟ್ನ ಬೋರ್ಡ್ ಸದಸ್ಯರಾದ ಡಾ.ಸುಶೀಲಾ ಅವರು ಕೆಎಸ್ಆರ್ಟಿಸಿ ಗೆ ಪ್ರದಾನ ಮಾಡಿದರು.
ಕೆ.ಎಸ್.ಆರ್.ಟಿ.ಸಿ ಹಾಸನ ಪ್ರಾದೇಶಿಕ ತರಬೇತಿ ಕೇಂದ್ರ ಪ್ರಾಂಶುಪಾಲರಾದ ಜಗದೀಶ್ ಕುಮಾರ್ ಹಾಗೂ ತುಮಕೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್ ಅವರು ನಿಗಮದ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.