i
ಹೊಸ ವರ್ಷದಲ್ಲಿ ಮೂರು ಸಾವಿರ ಖಾಲಿ ಹುದ್ದೆ ಭರ್ತಿ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
2024 ನೇ ಸಾಲಿನಲ್ಲಿ ಮೂರು ಸಾವಿರ ಖಾಲಿ ಹುದ್ದೆಗಳ ಭರ್ತಿ ಮಾಡಲು ಕರ್ನಾಟಕ ಲೋಕಸೇವಾ ಆಯೋಗ ಸಿದ್ಧತೆ ನಡೆಸಿದೆ.ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆಯಾ ಇಲಾಖೆಗಳು ಪ್ರಸ್ತಾವನೆ ಸಲ್ಲಿಸಿದ್ದು, ಸುಮಾರು 3,000 ಹುದ್ದೆಗಳ ನೇಮಕಾತಿಗೆ ಕೆಪಿಎಸ್ ಸಿ ಮುಂದಾಗಿದೆ, ಹೊಸವರ್ಷಕ್ಕೆ ಹುದ್ದೆಗಳ ಭರ್ತಿಗೆ ಗೆಜೆಟ್ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ರಾಜ್ಯ ಸರ್ಕಾರದ ವಿವಿಧ 30 ಇಲಾಖೆಗಳಿಗೆ 2024 ರಲ್ಲಿ ನೇಮಕಾತಿ ಪ್ರಕ್ರಿಯೆಗೆ ವೇಳಾಪಟ್ಟಿ ಬಿಡುಗಡೆಗೆ ಕೆಪಿಎಸ್ ಸಿ ಸಿದ್ಧತೆ ನಡೆಸಿದ್ದು ನೇಮಕಾತಿ ಮಾಡಿಕೊಡುವಂತೆ ಪ್ರಸ್ತಾವನೆಗಳು ಸ್ವೀಕೃತವಾಗಿವೆ ಎನ್ನಲಾಗಿದೆ.ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ- 2,583ಕರ್ನಾಟಕ ವಿದ್ಯುತ್ ನಿಗಮ : ಗ್ರೂಪ್ ಬಿ 286, ಗ್ರೂಪ್ ಸಿ 336ಜಯದೇವ ಹೃದ್ರೋಗ ಸಂಶೋಧನಾ ಸಂಸ್ಥೆ -100ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ- ಗ್ರೂಪ್ ಬಿ 50, ಗ್ರೂಪ್ ಸಿ 14ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ : ಗ್ರೂಪ್ ಬಿ 6, ಗ್ರೂಪ್ ಸಿ 38ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ – ಗ್ರೂಪ್ ಬಿ 41 ಕರ್ನಾಟಕ ಸಾರಿಗೆ ನಿಗಮ -36 ಹುದ್ದೆಗಳು ಖಾಲಿ ಇದ್ದು ಭರ್ತಿ ಮಾಡಿಕೊಡಲು ಕೆಪಿಎಸ್ ಸಿ ಗೆ ಕೋರಿಕೊಳ್ಳಲಾಗಿದೆ.