i
ದೇಶವನ್ನೇ ಒಡೆದ ಕಾಂಗ್ರೆಸ್ ಪಕ್ಷಕ್ಕೆ ಹಿಂದುತ್ವ ರುಚಿಸುವುದಿಲ್ಲ, ವಿದೇಶಿ ಜೀನ್ಸ್ಎಂದೂ ಭಾರತೀಯತೆ ಒಪ್ಪುದೇ ಇಲ್ಲ….
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಲುಷಿತ ಮನಸ್ಸಿನ ಕರ್ನಾಟಕದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕಣ್ಣಿಗೆ ಸದಾ ಕಾಮಾಲೆಯೇ. ಹೆಚ್.ಡಿ.ಕುಮಾರಸ್ವಾಮಿ ಅವರ ನಿಂದನೆಯೇ ಅದಕ್ಕೆ ಅಂಟಿದ ಬೇನೆ. ದೇಶವನ್ನೇ ಒಡೆದ ಪಕ್ಷಕ್ಕೆ ಹಿಂದುತ್ವವೂ ರುಚಿಸುವುದಿಲ್ಲ, ನಮ್ಮ ಆದರ್ಶ ಪರಂಪರೆಯೂ ಆಗುವುದಿಲ್ಲ. ಅಷ್ಟೇ ಏಕೆ, ಭಾರತವೂ ಸಹ್ಯವಲ್ಲ! ಅದರ , ವಿದೇಶಿ ಜೀನ್ಸ್ಎಂದೂ ಭಾರತೀಯತೆಯನ್ನು ಒಪ್ಪುದೇ ಇಲ್ಲ. ಇದೇನು ಹೊಸತಲ್ಲ ಎಂದು ಜೆಡಿಎಸ್ ಪಕ್ಷದ ರಾಜ್ಯ ಘಟಕವು ಟ್ವೀಟ್ ಮಾಡಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದೆ.ಕಲ್ಲಡ್ಕ ಪ್ರಭಾಕರ ಭಟ್ಟರ ಶ್ರೀರಾಮ ವಿದ್ಯಾಕೇಂದ್ರಕ್ಕೆ ಕುಮಾರಸ್ವಾಮಿ ಅವರು ಮುಕ್ತ ಮನಸ್ಸಿನಿಂದ ಭೇಟಿ ನೀಡಿದ್ದರು, ಹೌದು. ಅಲ್ಲಿನ ಶೈಕ್ಷಣಿಕ ವಾತಾವರಣ, ಮಕ್ಕಳ ಶಿಸ್ತು, ದೇಶಪ್ರೇಮವನ್ನು ಕಣ್ಣಾರೆ ಕಂಡ ಅವರ ಮನಸ್ಸಿನಲ್ಲಿ ಪರಿವರ್ತನೆ ಆಗಿದ್ದರೆ, ಅದೇನು ಮಹಾ ಅಪರಾಧವೇ? ಪರಿವರ್ತನೆಯೇ ಜಗದ ನಿಯಮ, ಪ್ರತಿಗಾಮಿತನವೇ ಮಾರಣಹೋಮ. ತುಷ್ಠೀಕರಣದ ಅಂಟುವ್ಯಾಧಿಯಿಂದ ಬಳಲುತ್ತಿರುವ ಕರ್ನಾಟಕ ಕಾಂಗ್ರೆಸ್ ಪಕ್ಷಕ್ಕೆ ಮಾರಣಹೋಮದಲ್ಲಿಯೇ ನಂಬಿಕೆ! ಎಂದು ಜೆಡಿಎಸ್ ಟೀಕಿಸಿದೆ.ಪ್ರಧಾನಿಗಳಾದ ನರೇಂದ್ರ ಮೋದಿ ಅವರ ಜತೆ ರಾಜ್ಯದ ಅಭಿವೃದ್ಧಿಯ ಬಗ್ಗೆಯೇ ಕುಮಾರಸ್ವಾಮಿ ಅವರು ಚರ್ಚಿಸಿದ್ದಾರೆ. ಸಂಶಯ ಪಿಶಾಚಿ ಕಾಂಗ್ರೆಸ್ಸಿಗೆ ಹುಳುಕು ಹುಡುಕುವುದೇ ಚಟ. ಜಾತಿ, ಧರ್ಮಗಳನ್ನು ಒಡೆದು ದೇಶಕ್ಕೆ ಶಾಪವಾಗಿ, ಬೆದರಿಕೆಯಾಗಿರುವ ಪ್ರತಿಗಾಮಿ ಕಾಂಗ್ರೆಸ್ ಪಕ್ಷಕ್ಕೆ ಶಾಂತಿ, ಸೌಹಾರ್ದತೆ ಎಂದರೇನೇ ಅಪಥ್ಯ ಇದೊಂದು ಕಲುಷಿತ ಕಾಂಗ್ರೆಸ್ ಎಂದು ಜೆಡಿಎಸ್ ಟ್ಯಾಗ್ ಲೈನ್ ಮಾಡಿ ಟೀಕಿಸಿದೆ.