i
ಡಿ.30ರಂದು ನಗರಸಭೆ ಆಯವ್ಯಯ ಸಲಹಾ ಸೂಚನಾ ಸಭೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರಸಭೆ ವತಿಯಿಂದ 2024-25 ನೇ ಸಾಲಿನ ಆಯವ್ಯಯ ತಯಾರಿ ಕುರಿತು ಸಾರ್ವಜನಿಕ ಸಲಹಾ ಸೂಚನಾ ಸಭೆಯನ್ನು ಡಿ.30 ರಂದು ಮಧ್ಯಾಹ್ನ 3 ಗಂಟೆಗೆ ನಗರದ ನಗರಸಭೆ ಕಚೇರಿ ಕಟ್ಟಡದಲ್ಲಿ ಏರ್ಪಡಿಸಲಾಗಿದೆ. ನಗರದ ಗಣ್ಯವ್ಯಕ್ತಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವರ್ತಕರು, ನಿವೃತ್ತ ಅಧಿಕಾರಿಗಳು, ನೌಕರರು, ಪತ್ರಕರ್ತರು, ಹಿರಿಯ ನಾಗರಿಕರು, ಸಾರ್ವಜನಿಕರು ಆಗಮಿಸಿ ತಮ್ಮ ಸಲಹೆ ಸೂಚನೆಯನ್ನು ನೀಡಬೇಕು ಎಂದು ನಗರಸಭೆ ಪೌರಯುಕ್ತೆ ರೇಣುಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.