i
ಚಿತ್ರದುರ್ಗ ಜಿಲ್ಲೆಯಲ್ಲಿ ಐದು ಕೋವಿಡ್ ಪಾಸಿಟಿವ್ ಕೇಸ್ ಪತ್ತೆ, ಇದರಲ್ಲಿ ಜೆಎನ್-1 ವೈರಸ್ ಇದೆಯಾ?…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದು ಚಿತ್ರದುರ್ಗ ಜಿಲ್ಲೆಯಲ್ಲೂ ಐದು ಕೋವಿಡ್ ಪಾಸಿಟಿವ್ ಕೇಸ್ ಪತ್ತೆಯಾಗಿವೆ. ಪತ್ತೆಯಾಗಿರುವ ಕೋವಿಡ್ ಪ್ರಕರಣಗಳಲ್ಲಿ ಜೆಎನ್-1 ವೈರಸ್ ಇದೆಯಾ ಎನ್ನುವುದು ಮುಂದೆ ತಿಳಿಯಲಿದೆ.ಪತ್ತೆ 5 ಪ್ರಕರಣಗಳಲ್ಲಿ ಚಿತ್ರದುರ್ಗ 2, ಚಳ್ಳಕೆರೆ 2, ಮೊಳಕಾಲ್ಮೂರು 1 ಕೋವಿಡ್ ಪ್ರಕರಣಗಳಾಗಿದೆ.ಶಬರಿಮಲೈ ಅಯ್ಯಪ್ಪಸ್ವಾಮಿ ದೇವರಿಗೆ ಹೋಗಿ ಬಂದಿದ್ದ ಒಬ್ಬರಲ್ಲಿ ಕೋವಿಡ್ ಪತ್ತೆಯಾಗಿದೆ. ಬೆಂಗಳೂರಿನಲ್ಲೇ ಹೋಮ್ ಐಸೊಲೇಷನ್ ನಲ್ಲಿ ವ್ಯಕ್ತಿ ಇದ್ದಾರೆ ಎನ್ನಲಾಗಿದೆ. ಉಳಿದ ನಾಲ್ವರು ಕೋವಿಡ್ ಪೀಡಿತರು ಸಹ ಹೋಮ್ ಐಸೋಲೇಷನ್ ನಲ್ಲಿದ್ದಾರೆ. ಪತ್ತೆ ಆಗಿರುವ 5 ಪ್ರಕರಣಗಳನ್ನು ಜೆಎನ್1 ಟೆಸ್ಟ್ ಗೆ ಆರೋಗ್ಯ ಇಲಾಖೆ ಕಳುಹಿಸಲಿದೆ ಎಂದು ಚಿತ್ರದುರ್ಗ ಡಿಹೆಚ್ ಓ ಡಾ.ರೇಣುಪ್ರಸಾದ್ ಮಾಹಿತಿ ನೀಡಿದ್ದಾರೆ.