i
ನೃತ್ಯ ಸ್ಪರ್ಧೆಯಲ್ಲಿ ಭಾರತ ಪ್ರತಿನಿಧಿಸಿ 36 ಚಿನ್ನ, 5 ಬೆಳ್ಳಿ ಪದಕ ಪಡೆದ ನೃತ್ಯಪಟುಗಳು…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ನೇಪಾಳದ ಕಠ್ಮಂಡುವಿನಲ್ಲಿ ಡಿಸೆಂಬರ್ ೨೬ ರಿಂದ ೨೮ರವರೆಗೆ ನಡೆದ ಅಂತರಾಷ್ಟ್ರೀಯ ದಕ್ಷಿಣ ಏಷ್ಯಾ ಹಿಪ್ಹಾಪ್ ನೃತ್ಯ ಸ್ಪರ್ಧೆಯಲ್ಲಿ ನಗರದ ಪ್ರಸಿದ್ಧ ನೃತ್ಯ ಸಂಸ್ಥೆಯಾಗಿರುವ ಸ್ಟೆಪ್ ಹೋಲ್ಡರ್ಸ್ನ ೨೧ ನೃತ್ಯಪಟುಗಳು ಭಾರತವನ್ನು ಪ್ರತಿನಿಧಿಸಿ ೩೬ ಚಿನ್ನ ಮತ್ತು ೫ ಬೆಳ್ಳಿ ಪದಕ ಪಡೆದಿರುತ್ತಾರೆ.೧೦,೧೨ ಮತ್ತು ೧೬ ವರ್ಷದ ಮಿನಿ ಹಾಗೂ ೧೨ ಮತ್ತು ೧೬ ವರ್ಷದ ಮೆಗಾ ಕ್ರಿವ್ ಗೋಲ್ಡ್ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾರತ, ಬಾಂಗ್ಲಾ, ಭೂತಾನ್, ನೇಪಾಳ ಮತ್ತಿತರೆ ದೇಶಗಳ ನೂರಾರು ಸ್ಪರ್ಧಿಗಳು ಪಾಲ್ಗೊಂಡಿದ್ದರು.ಇಂಡಿಯಾ ಸ್ಪೋಟ್ಸ್ ಏರೋಬಿಕ್ಸ್ ಅಂಡ್ ಫಿಟ್ನೆಸ್ ಫೆಡರೇಷನ್ (ಐಎಸ್ಎಎಫ್ಎಫ್) ನಿಂದ ಮಂಜೂರಾತಿ ಪಡೆದಿರುವ ಸ್ಪೋಟ್ಸ್ ಏರೋಬಿಕ್ಸ್ ಅಂಡ್ ಫಿಟ್ನೆಸ್ ಸೋಸಿಯೇಷನ್ ಆಫ್ ಕರ್ನಾಟಕ(ಎಸ್ಎಎಫ್ಎಕೆ) ವತಿಯಿಂದ ಮಂಡ್ಯದ ಪಿಇಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ೧೮ನೇ ರಾಷ್ಟ್ರೀಯ ಏರೋಬಿಕ್ಸ್ ಚಾಂಪಿಯನ್ಶಿಪ್ನ ಹಿಪ್ಹಾಪ್ ವಿಭಾಗದಲ್ಲಿ ಸ್ಟೆಪ್ ಹೋಲ್ಡರ್ಸ್ ಪ್ರತಿನಿಧಿಸಿದ್ದ ಕರ್ನಾಟಕ ತಂಡದ ಪಾಲಾಗಿದ್ದ ಹಿನ್ನೆಲೆಯಲ್ಲಿ ಈ ಅವಕಾಶ ದೊರೆತಿತ್ತು. ಸ್ಟೆಪ್ ಹೋಲ್ಡರ್ಸ್ಹನ್ಸಿ ಯು., ಸಿದ್ಧಾರ್ಥ ಶೆಟ್ಟಿ ಬಿ.ಎಸ್., ಕೃತಿ ಆರ್.ಎಸ್., ತಾನ್ವಿ ಕೆ.ಬಿ., ಸಚಿತಾ ಬಿ., ಪ್ರಚೇತ ಎನ್. ಭಟ್, ಪ್ರಥಮ್ ಕೆ.ಎನ್., ನಿಸರ್ಗ ಕೆ.ಎನ್., ಅಕ್ಷಯ್ ಜಿ., ಪಾರ್ಥ ಆರ್., ದಿವಿಜ್ ಸಿ.ಕೆ., ನಿಶ್ಚಿತ ವೈಶಾಕ್ ಕೆ., ಎ. ಶ್ರೇಯಸ್, ಉಮಾಪತಿ ಎಲ್.ಆರ್., ತೇಜಸ್ ಪಿ.ಹೆಚ್., ದಿಶಾ ಪಿಂಟೋ, ಆರ್ಯನ್ ಸಚಿನ್, ನಿಯಾ ಐನ ಗವಿಯಸ್, ಮಾನ್ಯ ವಿ. ಮಾಲೂರು, ನಿಧಿ ಸಿ. ನಾಯ್ಕ್, ವಿಶಾಲ್ ಪಿ. ಹೊಸಮನಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಮುಖ್ಯ ತರಬೇತುದಾರ ಅರುಣ್ ರಾಜ್ ಶೆಟ್ಟಿ ಮತ್ತು ತರಬೇತುದಾರ ಕಿರಣ್ ಇಕ್ಕೇರಿ ಭಾಗವಹಿಸಿದ್ದರು.