i
ಅಂಗವಿಕಲರ ಮಶಾಸನ ವೇತನ 6000 ರೂ.ಗೆ ಹೆಚ್ಚಿಸಲು ಸಿಎಂಗೆ ಮನವಿ…
ಚಂದ್ರವಳ್ಳಿ ನ್ಯೂಸ್, ಕಲಬುರಗಿ:
ಅಂಗವಿಕಲರ ಮಶಾಸನ ವೇತನ 6000 ರೂ.ವರೆಗೆ ಹೆಚ್ಚಿಸಬೇಕೆಂದು ನ್ಯೂಲೈಫ್ ಅಂಗವಿಕಲ ಮಹಿಳೆಯರ ಸಂಘದ ಸದಸ್ಯರು ಜಿಲ್ಲಾಧಿಕಾರಿ ಫೌಜಿಯಾ ತರನ್ನೂಮ್ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿಗೆ ಡಿಸಿ ಅವರಿಗೆ ಭೇಟಿ ನೀಡಿ ಅಂಗವಿಕಲರಿಗೆ ಈಗಾಗಲೇ ನೀಡಲಾಗುತ್ತಿರುವ ಮಶಾಸನ ತೀರ ಕಡಿಮೆ ಇದೆ. ದಿನಬಳಕೆಯ ವಸ್ತುಗಳ ಬೆಲೆ ಎರಿಕೆಯಿಂದ ಸ್ವಾಲಂಭಿಯಾಗಿರುವ ಬದುಕು ನಡೆಸಲು ಕಷ್ಟಕರವಾಗಿದೆ. ಘನತೆಯ ಬದುಕು ಕಟ್ಟಿಕೊಳ್ಳಲು ಅಂಗವಿಕಲರ ಮಶಾಸನ ವೇತನ 6000ರೂ. ಗೆ ಹೆಚ್ಚಿಸಬೇಕೆಂದು ಸಂಘದ ಸದಸ್ಯರು ಮನವರಿಗೆ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಶಾಸಕಿ ಪುತ್ರ ಯುವ ಮುಖಂಡರಾದ ಫರಾಜ್ ಉಲ್ ಇಸ್ಲಾಂ ಸಂಘದ ಅಧ್ಯಕ್ಷ ಮಹೆಬೂಬ್ ಬಿ, ಉಪಾಧ್ಯಕ್ಷೆ ಆಶಾದೇವಿ, ಕಾರ್ಯದರ್ಶಿ ಶಕೀಲಾ, ಖಜಾಂಚಿ ಶಮಿಮ್ ಬೇಗಂ ಸೇರಿದಂತೆ ಹಲವರು ಇದ್ದರು.