i
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಲೋಗೋ ಡಿಸೈನ್ ಸ್ಪರ್ಧೆ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಲೋಗೋ ಡಿಸೈನ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಮಂಡಳಿಯ ಉದ್ದೇಶಕ್ಕೆ ಅನುಗುಣವಾಗಿ ಹಾಗೂ ಯೋಜನೆಗಳ ಅಂಶಗಳನ್ನು ಒಳಗೊಂಡಿರುವ ಲೋಗೋವನ್ನು ಯಾವುದೇ ಕೃತಿ ಸ್ವಾಮ್ಯಕ್ಕೆ ಒಳಪಡದೆ ಸ್ವಂತ ರಚನೆಯಲ್ಲಿ ವಿನ್ಯಾಸ ಮಾಡಿರುವ ಲೋಗೋವನ್ನು ತಯಾರಿಸಿ ಮಂಡಳಿಗೆ ಕಳುಹಿಸಿ ನಗದು ಬಹುಮಾನವನ್ನು ಪಡೆಯಬಹುದಾಗಿದೆ.
ನಿಮ್ಮ ಪರಿಕಲ್ಪನೆಯನ್ನು ವಿವರಿಸುವ 50-100 ಪದಗಳ ಪುಟ್ಟ ಚಿಪ್ಪಣಿಯೊಂದಿಗೆ ಲೋಗೋ ವಿನ್ಯಾಸದ ಎ4 ಸೈಜ್ ಪ್ರಿಂಟ್ ಅನ್ನು ಮತ್ತು ಲೋಗೋ JPEG/PNG ಸ್ವರೂಪದಲ್ಲಿರಬೇಕು. ಜನವರಿ 25 ರ ಒಳಗಾಗಿ ಮಂಡಳಿಗೆ ಕಳುಹಿಸಬೇಕು.
ಲೋಗೋವನ್ನು ಕಾರ್ಯದರ್ಶಿಗಳು, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕಲ್ಯಾಣ ಸುರಕ್ಷಾ ಭವನ, ಐ.ಟಿ.ಐ ಕಾಲೇಜು ಆವರಣ, ಬನ್ನೇರುಘಟ ರಸ್ತೆ, ಡೈರಿ ಸರ್ಕಲ್, ಬೆಂಗಳೂರು-560029 ಇಲ್ಲಿಗೆ ಕಳುಹಿಸುವುದು.
ಆಯ್ಕೆಯಾಗುವ ಲೋಗೋ ಬಳಕೆಯ ಸಂಪೂರ್ಣ ಹಕ್ಕು ಮಂಡಳಿಗೆ ಮಾತ್ರ ಸಂಬಂಧಿಸಿರುತ್ತದೆ. ಅದರ ರಚನೆಕಾರರಿಗೆ ಯಾವುದೇ ಹಕ್ಕು ಉಳಿದಿರುವುದಿಲ್ಲ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಮತ್ತು ಕಾರ್ಯದರ್ಶಿ ಭಾರತಿ .ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.