i
ಜ.26ರಿಂದ ಫಲಪುಷ್ಪ ಪ್ರದರ್ಶನ: ವಿವಿಧ ಸ್ಪರ್ಧೆಗಳಿಗೆ ಅರ್ಜಿ ಆಹ್ವಾನ…
ಚಂದ್ರವಳ್ಳಿ ನ್ಯೂಸ್, ತುಮಕೂರು:
ತೋಟಗಾರಿಕೆ ಇಲಾಖೆ ಆವರಣದಲ್ಲಿ ಜನವರಿ ೨೬ ರಿಂದ ೨೮ರವರೆಗೆ ೩ ದಿನಗಳ ಕಾಲ ’ತೋಟಗಾರಿಕೆ ಫಲ ಪುಷ್ಪ ಪ್ರದರ್ಶನ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಾರ್ವಜನಿಕ ತೋಟಗಳು, ಸಂಸ್ಥೆಯ ತೋಟಗಳು, ಆಸ್ಪತ್ರೆ ತೋಟಗಳು, ಶಿಕ್ಷಣ ಸಂಸ್ಥೆಯ ತೋಟಗಳು, ಆಡಳಿತ ಕಛೇರಿ ತೋಟಗಳು, ಹೋಟೆಲ್ ತೋಟಗಳು, ಸಿನಿಮಾ ಥಿಯೇಟರ್ಗಳ ತೋಟಗಳು, ನರ್ಸಿಂಗ್ ಹೋಮ್ ತೋಟಗಳು, ಗುಲಾಬಿ ತೋಟಗಳು, ಔದ್ಯೋಗಿಕ ತೋಟಗಳು, ಅಥಿತಿ ಗೃಹಗಳ ತೋಟಗಳು, ಕ್ವಾಟರ್ಸ್ ತೋಟಗಳು, ಸಾರ್ವಜನಿಕ ಉದ್ಯಾನವನಗಳು, ಖಾಸಗಿ ತೋಟಗಳು, ಖಾಸಗಿ-ಸರ್ಕಾರಿ ಸಂಸ್ಥೆಗಳಿಂದ ಮತ್ತು ಮನೆಗಳ ಮುಂಭಾಗದ ಕೈ ತೋಟಗಳು, ಅಲಂಕಾರಿಕ ಉದ್ಯಾನವನಗಳು, ಛಾವಣಿ ತೋಟ, ಮನೆ ಒಳಾಂಗಣ ಅಲಂಕಾರ ತೋಟ, ಕುಂಡದಲ್ಲಿ ಬೆಳೆಸಿದ ಅಲಂಕಾರಿಕ ಗಿಡಗಳು, ತರಕಾರಿಗಳು, ಹಣ್ಣುಗಳ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಜನವರಿ ೨೨ರ ಸಂಜೆ ೫ ಗಂಟೆಯೊಳಗೆ ಸಲ್ಲಿಸಬಹುದಾಗಿದೆ. ಆಸಕ್ತ ಸಾರ್ವಜನಿಕರು, ಸರ್ಕಾರಿ ಸಂಸ್ಥೆಗಳು ಹಾಗೂ ಸರ್ಕಾರೇತರ ಸಂಸ್ಥೆಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ.೯೭೪೧೯೨೮೯೬೬ನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.