i
ಅಂಗನವಾಡಿ ಕಾರ್ಯಕರ್ತೆ/ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ…
ಚಂದ್ರವಳ್ಳಿ ನ್ಯೂಸ್, ತುಮಕೂರು:
ಗುಬ್ಬಿ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಖಾಲಿ ಇರುವ ಮಿನಿ ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರ ಹುದ್ದೆಗಳನ್ನು ಗೌರವಧನ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಮಹಿಳಾ ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ನಲ್ಲೂರು ಮತ್ತು ಕೊಪ್ಪ ಮಿನಿ ಅಂಗನವಾಡಿ ಕೇಂದ್ರಗಳಲ್ಲಿ ಮಿನಿ ಅಂಗನವಾಡಿ ಕಾರ್ಯಕರ್ತೆ ಹುದ್ದೆ ಹಾಗೂ ಗದ್ದೇಹಳ್ಳಿ-೨, ಅಡಗೂರು-ಬಿ, ಕಡೇಪಾಳ್ಯ, ಕಿಟ್ಟದಕುಪ್ಪೆ-ಬಿ, ರಂಗಮ್ಮನಕಟ್ಟೆ, ನಿಟ್ಟೂರು-ಸಿ, ಗಂಗಯ್ಯನಪಾಳ್ಯ ಹೊಸಪಾಳ್ಯ, ಹರದಗೆರೆ ಬೋವಿ ಕಾಲೋನಿ, ಜಯಚಂದ್ರ ಬಡಾವಣೆ, ಪಿನ್ನೇನಹಳ್ಳಿ ಗೊಲ್ಲರಹಟ್ಟಿ, ಮಂಚಲದೊರೆ-ಬಿ, ಅಂತಪುರಪಾಳ್ಯ, ಚಿಕ್ಕ ಕುನ್ನಾಲ-ಡಿ, ಕಂಬೇರಹಟ್ಟಿ, ಜಿ.ಹೊಸಹಳ್ಳಿ-ಬಿ, ಎಂ.ಎನ್.ಕೋಟೆ-ಸಿ, ಬೇಲೂರು, ನಿಂಗಮ್ಮನಹಳ್ಳಿ-೨, ರೆಹಮತ್ ನಗರ, ಮಲ್ಲಪ್ಪನಹಳ್ಳಿ, ಎಸ್.ಕೊಡಗೀಹಳ್ಳಿ ಕಾಲೋನಿ, ವಡ್ಡರಹಳ್ಳಿ, ಹೊಸಹಟ್ಟಿ, ಮರಾಠಿಪಾಳ್ಯ, ವಿನಾಯಕ ನಗರ, ದೊಡ್ಡನೆಟಕುಂಟೆ, ವಡವನಘಟ್ಟ, ಚಿಕ್ಕ ಕುನ್ನಾಲ-ಎ, ಪ್ರಭುವನಹಳ್ಳಿ, ಡಿ.ರಾಂಪುರ, ಲಿಂಗಮ್ಮನಹಳ್ಳಿ ಪಾಳ್ಯ, ಗೌರಿಪುರ, ಗುಡ್ಡದಹಳ್ಳಿ, ಕೊಪ್ಪ ಕಾಲೋನಿ, ಹೊಸಪಾಳ್ಯ, ಹರದಗೆರೆ, ಮುಸ್ಲಿಂ ಬ್ಲಾಕ್, ಬುಕ್ಕಸಾಗರ, ಜಿ.ಹರಿವೇಸಂದ್ರ, ಬಸವ ಪಟ್ಟಣ, ಚೇಳೂರುಹಟ್ಟಿ, ಇಡಕನಹಳ್ಳಿ, ಕೆ.ಮತ್ತಿಘಟ್ಟ, ಅತ್ತಿಕಟ್ಟೆ ಕೇಂದ್ರಗಳಲ್ಲಿ ಸಹಾಯಕಿಯರ ಹುದ್ದೆಗಳು ಖಾಲಿ ಇವೆ. ಆಸಕ್ತರು ವೆಬ್ಸೈಟ್ https://karnemakaone.kar.nic.in/abcd/ ಮೂಲಕ ಫೆಬ್ರವರಿ ೫ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಗುಬ್ಬಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ(ದೂ.ವಾ.ಸಂ.೦೮೧೩೧-೨೨೩೭೩೧)ಯನ್ನು ಸಂಪರ್ಕಿಸಬಹುದಾಗಿದೆ.