i
ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪಿಯ ಸೆರೆ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಗಾಜನೂರು ಕಡೆಯಿಂದ ಶಿವಮೊಗ್ಗ ನಗರದ ಕಡೆಗೆ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುವ ಉದ್ದೇಶದಿಂದ ಇನೊವಾ ಕಾರಿನಲ್ಲಿ ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ದೊಡ್ಡಪೇಟೆ ಮತ್ತು *ತುಂಗಾನಗರ ಪೊಲೀಸರು ಹಳೆ ಮಂಡ್ಲಿ ಪಂಪ್ ಹೌಸ್ ನ ಹತ್ತಿರ ಸಿಲ್ವರ್ ಬಣ್ಣದ ಇನ್ನೋವಾ ಕಾರನ್ನು ತಡೆದು ಪರಿಶೀಲನೆ ಮಾಡಿದಾಗ *ಕಾರಿನ ಹಿಂಭಾಗದ ಡಿಕ್ಕಿಯಲ್ಲಿ ಗಾಂಜಾ ಪತ್ತೆಯಾಗಿದೆ.ಪ್ಲಾಸ್ಟಿಕ್ ಕವರ್ ನಲ್ಲಿ ಗಾಂಜಾವನ್ನು ಸುತ್ತಿ ಇಟ್ಟಿದ್ದು ಮತ್ತು ಕಾರಿನ ಒಳಭಾಗದ ಮಧ್ಯದ ಸೀಟಿನ ಕೆಳಭಾಗದಲ್ಲಿ ಹರಿತವಾದ ಆಯುಧಗಳು* ಇರುವುದು ಕಂಡು ಬಂದಿದೆ. ನಂತರ ಕಾರಿನ ಚಾಲಕ ಮಾರ್ನಮಿಬೈಲಿನ * ಅರ್ಬಾಜ್ @ ಹರ್ಬಾಜ್ @ ಹಜರತ್ @ ಅರ್ಬಾಜ್ ಖಾನ್, (23 ) ಈತನನ್ನು ದಸ್ತಗಿರಿ ಮಾಡಿ ಆರೋಪಿತನಿಂದ ಅಂದಾಜು ಮೌಲ್ಯ 23,000/- ರೂಗಳ 440 ಗ್ರಾಂ ತೂಕದ ಒಣ ಗಾಂಜಾ ಮತ್ತು 1 ಮಚ್ಚು, 1 ಬರ್ಚಿ ಮತ್ತು 1 ಡ್ರ್ಯಾಗರ್ ಅನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.ಆರೋಪಿತನ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0024/2024 ಕಲಂ 8(ಸಿ), 20(ಬಿ) NDPS ಕಾಯ್ದೆ ಮತ್ತು ಕಲಂ 25(1)(ಎ) ಆಯುಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.