i
ಭೋವಿ ಕಾಲೋನಿ ಶಿಲ್ಪಿ ಮನೆಯಲ್ಲಿ ಕಳವು ಮಾಡಿದ್ದ ಮನೆಗಳ್ಳ ಬಂಧನ…
ಚಂದ್ರವಳ್ಳಿ ನ್ಯೂಸ್, ಶಿರಾಳಕೊಪ್ಪ:
ಇಲ್ಲಿನ ಭೋವಿ ಕಾಲೋನಿಯ ವಾಸಿ ಪ್ರಭಾಕರ ಶಿಲ್ಪಿ ಅವರ ಮನೆಯಲ್ಲಿ ಕಳ್ಳತನ ನಡೆಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಗೋವಾದ ವಾಸ್ಕೊ ವಾಸಿಯಾದ ಹುಬ್ಬಳ್ಳಿ ಮೂಲದ ಆರೋಪಿ ಖಾಜಾ ಹಾವೇರಿ ಅಲಿಯಾಸ್ ಖಾಜಾ(೨೪)ನನ್ನು ದಸ್ತಗಿರಿ ಮಾಡಿ, ಮನೆಗಳ್ಳತನ ಪ್ರಕರಣ ಮತ್ತು ಹಾನಲ್ ಪೊಲೀಸ್ ಠಾಣೆಯ ದ್ವಿ ಚಕ್ರ ವಾಹನ ಕಳ್ಳತನ ಸೇರಿ ಒಟ್ಟು ೨ ಪ್ರಕರಣ ಪತ್ತೆ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದ ಅಂದಾಜು ಮೌಲ್ಯ ೬,೮೧,೨೦೦ ರೂಗಳ ೧೧೧.೮೫ ಗ್ರಾಂ ತೂಕ ಬಂಗಾರ ಆಭರಣ ಮತ್ತು ೩೨೬ ಗ್ರಾಂ ತೂಕದ ಬೆಳ್ಳಿಯ ಆಭರಣ ಮತ್ತು ಅಂದಾಜು ಮೌಲ್ಯ ೩೫,೦೦೦ ರೂಗಳ ಒಂದು ದ್ವಿ ಚಕ್ರ ವಾಹನ ಸೇರಿ ಒಟ್ಟು ೭,೧೬,೨೦೦ ರೂಗಳ ಮಾಲನ್ನು ಅಮಾನತುಪಡಿಸಿಕೊಳ್ಳಲಾಗಿದೆ.ಪ್ರಭಾಕರ ಅವರ ಮನೆಯಲ್ಲಿ ಡಿ. ೨೮ ರಂದು ಮನೆಯ ಹಿಂಬಾಗಿಲಿನಿಂದ ಮನೆಯ ಒಳಗೆ ಬಂದು ಬೀರುವಿನಲ್ಲಿದ್ದ ಅಂದಾಜು ಮೌಲ್ಯ ೬,೮೧,೦೦೦ ರೂಗಳ ಬಂಗಾರದ ಆಭರಣ ಮತ್ತು ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದನು.ಈ ಬಗ್ಗೆ ನೀಡಿದ ದೂರಿನ ಮೇರೆಗೆ ಶಿರಾಳಕೊಪ್ಪ ಪೊಲೀಸರು ತಂಡ ರಚಿಸಿ ಆರೋಪಿಯನ್ನು ಪತ್ತೆ ಮಾಡಿದ್ದಾರೆ.