i
ಕರ್ಕಶ ಶಬ್ದ ಮಾಡುವ ಸೈಲೆನ್ಸರ್ ನಾಶ ಮಾಡಿದ ಪೊಲೀಸರು…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಕರ್ಕಶ ಶಬ್ದ ಮಾಡುವ ಸೈಲೆನ್ಸರ್ಗಳು ಮತ್ತು ಹಾಫ್ಹೆಲ್ಮೆಟ್ಗಳ ಮೇಲೆ ಸಂಚಾರ ಠಾಣೆ ಪೊಲೀಸರು ರೋಡ್ರೋಲರ್ಹರಿಸಿ ನಾಶ ಪಡಿಸಿದರು. ಸಾರ್ವಜನಿಕರಿಗೆ ಇವುಗಳ ಕುರಿತು ಜಾಗೃತಿ ಮೂಡಿಸುವ ಹಿನ್ನೆಲೆ ಗೋಪಿ ಸರ್ಕಲ್ನಲ್ಲಿ ರೋಡ್ರೋಲರ್ಹತ್ತಿಸಿ ನಾಶಪಡಿಸಲಾಯಿತು.
ಸುಮಾರು 3 ಸಾವಿರ ಹಾಫ್ಹೆಲ್ಮೆಟ್ಗಳು, 70 ಸೈಲೆನ್ಸರ್ಗಳನ್ನು ಸಂಚಾರ ಪೊಲೀಸರು ನಾಶಪಡಿಸಿದ್ದಾರೆ. ಸರ್ಕಲ್ನಲ್ಲಿ ಎಲ್ಲವನ್ನು ಸಾಲಾಗಿ ಜೋಡಿಸಿ ಅವುಗಳ ಮೇಲೆ ರೋಡ್ರೋಲರ್ಹತ್ತಿಸಲಾಯಿತು.
ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ಕುಮಾರ್, ಸಂಚಾರ ಠಾಣೆ ಇನ್ಸ್ಪೆಕ್ಟರ್ಸಂತೋಷ್ಕುಮಾರ್ಸೇರಿದಂತೆ ಪೂರ್ವ ಮತ್ತು ಪಶ್ಚಿಮ ಸಂಚಾರ ಠಾಣೆಯ ಸಿಬ್ಬಂದಿ ಇದ್ದರು. ಕಾರ್ಯಾಚರಣೆಯನ್ನು ವೀಕ್ಷಿಸಲು ಗೋಪಿ ಸರ್ಕಲ್ನಲ್ಲಿ ದೊಡ್ಡ ಸಂಖ್ಯೆಯ ಜನ ಜಮಾಯಿಸಿದ್ದರು.
ಕಾರ್ಯಾಚರಣೆ ಇದೆ ಮೊದಲಲ್ಲ-ಹಾಫ್ಹೆಲ್ಮೆಟ್ಗಳ ವಿರುದ್ಧ ಸಂಚಾರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿರುವುದು ಇದೆ ಮೊದಲಲ್ಲ. ಕೆಲವು ತಿಂಗಳ ಹಿಂದೆ ಸಾವಿರಾರು ಹಾಫ್ಹೆಲ್ಮೆಟ್ಗಳನ್ನು ದ್ವಿಚಕ್ರ ವಾಹನ ಸವಾರರಿಂದ ವಶಕ್ಕೆ ಪಡೆದು ನಾಶ ಪಡಿಸಿದ್ದರು. ಇನ್ನು ಹಾಫ್ಹೆಲ್ಮೆಟ್ಮಾರಾಟ ಮಾಡುತ್ತಿದ್ದ ಅಂಡಿಗಳ ಮೇಲು ದಾಳಿ ನಡೆಸಿದ್ದರು. ಹಾಫ್ಹೆಲ್ಮೆಟ್ನಿಂದ ವಾಹನ ಸವಾರರಿಗೆ ರಕ್ಷಣೆ ಸಿಗುವುದಿಲ್ಲ. ಐಎಸ್ಐ ಗುರುತಿನ ಹೆಲ್ಮೆಟ್ಧರಿಸುವಂತೆ ಪೊಲೀಸರು ಜಾಗೃತಿ ಮೂಡಿಸಿದ್ದರು. ಇನ್ನು, ಬೈಕುಗಳಿಗೆ ಕರ್ಕಶ ಶಬ್ದ ಮಾಡುವ ಸೈಲೆನ್ಸರ್ಗಳನ್ನು ಅಳವಡಿಸಿ ತಿರುಗಾಡುತ್ತಿದ್ದವರಿಗು ಪೊಲೀಸರು ಬಿಸಿ ಮುಟ್ಟಿಸಿದ್ದರು. ಈ ಪುನಃ ಕಾರ್ಯಾಚರಣೆ ನಡೆಸಿದ್ದಾರೆ.