i
ಬ್ರಿಟನ್ ರಾಜಕುಮಾರ 3ನೇ ಚಾರ್ಲ್ಸ್ ಗೆ ಕ್ಯಾನ್ಸರ್…
ಚಂದ್ರವಳ್ಳಿ ನ್ಯೂಸ್, ಲಂಡನ್:
ಬ್ರಿಟನ್ ರಾಜ ೩ನೇ ಚಾರ್ಲ್ಸ್ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಮಾಹಿತಿಯನ್ನು ಬಕಿಂಗ್ಹ್ಯಾಮ್ ಅರಮನೆ ಸ್ಪಷ್ಟಪಡಿಸಿದೆ.
ಕಿಂಗ್ ಚಾರ್ಲ್ಸ್ ಒಂದು ರೀತಿಯ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂದು ಬಕಿಂಗ್ ಹ್ಯಾಮ್ ಅರಮನೆ ಹೊರಡಿಸಿದ ಹೇಳಿಕೆ ತಿಳಿಸಿದೆ.
ದಿನನಿತ್ಯದ ಚಿಕಿತ್ಸೆಯಲ್ಲಿ ಕಿಂಗ್ ಚಾರ್ಲ್ಸ್ಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಹೀಗಾಗಿ ಕಿಂಗ್ ಚಾರ್ಲ್ಸ್ ಸಾರ್ವಜನಿಕವಾಗಿ ಯಾವುದೇ ಕಾರ್ಯಕ್ರಮದಲ್ಲಿ ತೊಡಗುವುದಕ್ಕೆ ವೈದ್ಯರು ನಿರಾಕರಿಸಿದ್ದಾರೆ. ಆದಾಗ್ಯೂ, ಈ ಅವಧಿಯಲ್ಲಿ ಅವರು ಅಧಿಕೃತ ಕೆಲಸವನ್ನು ಮುಂದುವರಿಸುತ್ತಾರೆ.
ಕಿಂಗ್ ಚಾರ್ಲ್ಸ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಸುದ್ದಿ ತಿಳಿದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಅವರು ಶೀಘ್ರದಲ್ಲೇ ಪೂರ್ಣ ಶಕ್ತಿಯೊಂದಿಗೆ ಮರಳುವುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ತಿಳಿಸಿದ್ದಾರೆ.