i
ಕರಿಮಣಿ ಮಾಲೀಕ ನೀನಲ್ಲ ಎಂದ ಪತ್ನಿ, ಆತ್ಮಹತ್ಯೆ ಮಾಡಿಕೊಂಡ ಪತಿ…
ಚಂದ್ರವಳ್ಳಿ ನ್ಯೂಸ್, ಚಾಮರಾಜನಗರ:
‘ಕರಿಮಣಿ ಮಾಲೀಕ ನೀನಲ್ಲ‘ ಎಂದು ಪತ್ನಿ ರೀಲ್ಸ್ ಮಾಡಿದ ವಿಚಾರಕ್ಕೆ ದಂಪತಿ ನಡುವೆ ಜಗಳ ಏರ್ಪಟ್ಟು, ಪತಿ ಮನನೊಂದು ನೇಣು ಹಾಕಿಕೊಂಡು
ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ತಾಲ್ಲೂಕಿನ ಪಿ.ಜಿ.ಪಾಳ್ಯದಲ್ಲಿ ನಡೆದಿದೆ.
ಗ್ರಾಮದ ಕುಮಾರ್ (33) ಆತ್ಮಹತ್ಯೆ ಮಾಡಿಕೊಂಡವರು. ಅವರ ಪತ್ನಿ ರೂಪಾ, ತನ್ನ ಸೋದರ ಮಾವ ಮತ್ತು ಸಹೋದರಿ ಜೊತೆ ಸೇರಿಕೊಂಡು ಕೆಲವು ದಿನಗಳ ಹಿಂದೆ ‘ಕರಿಮಣಿ ಮಾಲೀಕ ನೀನಲ್ಲ‘ ಹಾಡಿಗೆ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದರು. ಈ ರೀಲ್ಸ್ ನೋಡಿ, ಸ್ನೇಹಿತರು ಕುಮಾರ್ ಅವರನ್ನು ರೇಗಿಸಿದ್ದರು ಎಂದು ಆರೋಪಿಸಲಾಗಿದೆ.
ಈ ವಿಚಾರವಾಗಿ ಕುಮಾರ್ ಮತ್ತು ರೂಪಾ ನಡುವೆ ಮಾತಿನ ಚಕಮಕಿ ನಡೆದಿದ್ದು, ಮನನೊಂದು ಕುಮಾರ್ಬುಧವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹನೂರು ಠಾಣೆಯಲ್ಲಿ ದೂರು ದಾಖಲಾಗಿದೆ.