i
ಬಾರ್, ಡಾಬಾ ಹೋಟೆಲ್ ಗಳಲ್ಲಿ ಸಿ ಸಿ ಕ್ಯಾಮರಾ-ಶಿವರಾಜ್…
ಚಂದ್ರವಳ್ಳಿ ನ್ಯೂಸ್, ಚಿಂತಾಮಣಿ:
ಗ್ರಾಮಾಂತರ ಠಾಣಾ ವ್ಯಾಪ್ತಿಗೆ ಒಳಪಡುವ ಬಾರ್ ಡಾಬಾ ರೆಸ್ಟೋರೆಂಟ್ ಹೋಟೆಲ್ ಗಳಲ್ಲಿ ಭದ್ರತೆಯ ಹಿತದೃಷ್ಠಿಯಿಂದ ಸಿಸಿ ಕ್ಯಾಮೆರಾ ಗಳನ್ನು ಅಳವಳಿಸುವಂತೆ ಮಾಲೀಕರಿಗೆ ಗ್ರಾಮಾಂತರ ಠಾಣೆಯ ನೂತನ ಸರ್ಕಲ್ ಇನ್ಸ್ಪೆಕ್ಟರ್ ಎಸ್ ಶಿವರಾಜ್ ಸೂಚನೆ ನೀಡಿದರು.
ಬುಧವಾರದಂದು ಚಿಂತಾಮಣಿಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನೂತನವಾಗಿ ಪದಗ್ರಹಣ ಸ್ವೀಕರಿಸಿರುವ ಸರ್ಕಲ್ ಇನ್ಸ್ಪೆಕ್ಟರ್ ಎಸ್ ಶಿವರಾಜ್ ರವರು ಎಲ್ಲಾ ಬಾರ್ ಡಾಬಾ ರೆಸ್ಟೋರೆಂಟ್ ಮಾಲೀಕರ ಸಭೆ ಕರೆದು ಮಾತನಾಡಿದ ಅವರು ಗ್ರಾಮಾಂತರ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭದ್ರತೆ ಹಿತ ದೃಷ್ಟಿಯಿಂದ
ಬಾರ್ ಗಳಲ್ಲಿ ಕಳ್ಳತನ ಆಗದ ಹಾಗೆ ಅಹಿತಕರ ಘಟನೆಗಳು ನಡೆದ ಸಂದರ್ಭದಲ್ಲಿ ಮಾಹಿತಿಗಾಗಿ ಸಿ ಸಿ ಕ್ಯಾಮರು ಬಾರ್ ಒಳಗೂ ಹೊರಗೂ ಮತ್ತು ರಸ್ತೆಗೆ ಇರಬೇಕು, ಎಂ ಎಸ್ ಐ ಎಲ್ ಗಳಲ್ಲಿ ಗ್ರಾಹಕರು ಕುಡಿಯು ವ್ಯಸ್ಥೆಗೆ ಅವಕಾಶವಿಲ್ಲ ಒಂದು ವೇಳೆ ಆ ರೀತಿ ಮಾಲೀಕರು ಅವಕಾಶ ನೀಡಿದ್ದಾರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು, ಬಾರ್ ರೆಸ್ಟೋರೆಂಟ್ ಗಳಲ್ಲಿ ಕೆಲಸ ಮಾಡುವವರ ಆಧಾರ್ ಕಾರ್ಡ್ ಸಮೇತ ಸಂಪೂರ್ಣ ಮಾಹಿತಿಯನ್ನು ನಿಮ್ಮ ದಾಖಲಾತಿ ಪುಸ್ತಕದಲ್ಲಿ ನಮೂದಿಸಿರಬೇಕು ,ಕಾರಣ ಬೇರೆ ಕಡೆಗಳಲ್ಲಿ ಅಹಿತರಕರ ಘಟನೆಗಳಲ್ಲಿ ಭಾಗಿಯಾಗಿ ಇಲ್ಲಿ ಬಂದು ಕೆಲಸಕ್ಕೆ ಸೇರಿಕೊಂಡಿರುತ್ತಾರೆ ಹಾಗಾಗಿ ಅಂತಹವರಿಗೆ ಮಾಲಿಕರು ಅವಕಾಶ ನೀಡಬಾರದು.
ಚಿಂತಾಮಣಿ ಗ್ರಾಮಾಂತರ ವ್ಯಾಪ್ತಿಯಲ್ಲಿ ಒಂಬತ್ತು ಬಾರ್ ಗಳು,ನಾಲ್ಕು ಡಾಬಾ ಸೇರಿದಂತೆ ಒಂದು ರೆಸಾರ್ಟ್ ಇದ್ದು ಅವುಗಳಲ್ಲಿ ಮಹಿಳೆಯರು ಯಾರಾದರೂ ಕೆಲಸ ನಿರ್ವಹಿಸುತ್ತಿದ್ದರೆ ಸೂಕ್ತ ಭದ್ರತೆ ನೀಡಬೇಕು ಕೆಲಸ ನಿರ್ವಹಿಸುವ ಮಹಿಳೆಯರ ಮೇಲೆ ಯಾವುದೇ ಕಾರಣಕ್ಕೂ ದೌರ್ಜನ್ಯಗಳು ನಡೆಯದಂತೆ ನೋಡಿಕೊಳ್ಳಬೇಕು,
ಬಾರ್ ಒಳಗೆ ಅಥವಾ ಸಮೀಪದಲ್ಲಿ ಅಹಿತಕರ ಘಟನೆಗಳು ನಡೆಯುವ ಸಂದರ್ಭಗಳು ಕಂಡುಬಂದಲ್ಲಿ ಕೂಡಲೇ ೧೧೨ ಗೆ ಕರೆ ಮಾಡಿ ಅಥವಾ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ತಿಳಿಸಬೇಕೆಂದು ಮಾಲೀಕರಿಗೆ ಸೂಚನೆ ನೀಡಿದರು.
ಚುನಾವಣೆ ಹತ್ತಿರ ಬರುತ್ತಿರುವುದರಿಂದ ಯಾವುದೇ ಕಾರಣಕ್ಕೂ ಅನಧೀಕೃತವಾಗಿ ಮಧ್ಯ ಮಾರಾಟ ಮಾಡುವುದು ಕಂಡು ಬಂದಲ್ಲಿ ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆಂದು ತಿಳಿಸಿದರು.