i
ಬಸ್ ನಿಲ್ದಾಣದಲ್ಲಿ ಯತ್ನಾಳ್ ಕುಳಿತು ಜ್ಯೋತಿಷ್ಯ ಹೇಳಲಿ-ಸಚಿವ ಮಧು…
ಚಂದ್ರವಳ್ಳಿ ನ್ಯೂಸ್, ಕಲಬುರಗಿ:
ಲೋಕಸಭೆ ಚುನಾವಣೆ ಬಳಿಕ ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವ ಮಧು ಬಂಗಾರಪ್ಪ, ಬಸನಗೌಡ ಪಾಟೀಲ್ ಯತ್ನಾಳ್ ಗೆ ಮಾಡಲು ಕೆಲಸ ಇಲ್ಲ, ಬಸ್ ನಿಲ್ದಾಣದ ಬಳಿ ಕುಳಿತು ಜ್ಯೋತಿಷ್ಯ ಹೇಳೋಕೆ ಹೇಳಿ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಆಪರೇಷನ್ ಕಮಲ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಮಧು ಬಂಗಾರಪ್ಪ, ಬಿಜೆಪಿಯವರ ಆಪರೇಷನ್ ನಾವು ಫೇಲ್ ಮಾಡ್ತೇವೆ. ಅವರು ಯಾವತ್ತೋ ಸಂವಿಧಾನಾತ್ಮಕವಾಗಿ ಅಧಿಕಾರಕ್ಕೆ ಬಂದಿಲ್ಲ. ಕಳೆದ ಭಾರಿ ಹೀಗ್ ಮಾಡಿಯೇ 67ಕ್ಕೆ ಬಂದಿದ್ದಾರೆ. ಮುಂದೆ ಹೀಗೆ ಮಾಡಿದ್ರೆ 37 ಕ್ಕೆ ಬರ್ತಾರೆಎಂದು ಲೇವಡಿ ಮಾಡಿದರು.