i
150 ರೇಷ್ಮೆ ಸೀರೆ ವಶ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯ ತಿರುಮಲ ಡಾಬದ ಬಳಿಯ ಚೆಕ್ ಪೋಸ್ಟ್ ನಲ್ಲಿ ಗುರುವಾರ 150 ರೇಷ್ಮೆ ಸೀರೆ ವಶ ಪಡಿಸಿಕೊಳ್ಳಲಾಗಿದೆ. ಚುನಾವಣೆ ಮಾದರಿ ನೀತಿ ಸಂಹಿತೆ ಹಿನ್ನಲೆಯಲ್ಲಿ ಚೆಕ್ ಪೊಸ್ಟ್ನಲ್ಲಿ ತಪಾಸಣೆ ನಡೆಸುವಾಗ ಸೂಕ್ತ ದಾಖಲೆಗಳು ಇಲ್ಲದ 150 ರೇಷ್ಮೆ ಸೀರೆ ಇತರೆ ವಸ್ತುಗಳು ದೊರಕಿವೆ. ಇವುಗಳನ್ನು ವಶ ಪಡಿಸಿಕೊಂಡು ಚಿತ್ರದುರ್ಗ ಖಜಾನೆಯಲ್ಲಿ ಅಭಿರಕ್ಷೆಯಲ್ಲಿ ಇಡಲಾಗಿದೆ ಎಂದು ಚಿತ್ರದುರ್ಗ ತಹಶೀಲ್ದಾರ್ ಡಾ.ನಾಗವೇಣಿ ತಿಳಿಸಿದ್ದಾರೆ.