i
ಇಬ್ಬರು ಮಕ್ಕಳೊಂದಿಗೆ ಶಿವಮ್ಮ ಪಾಲಯ್ಯ ನಾಪತ್ತೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ತಾಲ್ಲೂಕಿನ ಚಿನ್ನೂರ ತಿಪ್ಪಯ್ಯನಹಟ್ಟಿ ಗ್ರಾಮದ ಶಿವಮ್ಮ ಗಂಡ ಪಾಲಯ್ಯ(30) ಹಾಗೂ ಆಕೆಯ ಮಕ್ಕಳಾದ ಕಾರ್ತಿಕ(10) ಭೂಮಿಕ(8) ಈ ಮೂವರು ವ್ಯಕ್ತಿಗಳ ಕಾಣೆಯಾಗಿರುವ ಕುರಿತು ಮಾ.25 ರಂದು ತುರುವನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಾಣೆಯಾದವರ ಚಹರೆ ಇಂತಿದೆ : ಶಿವಮ್ಮ 5 ಅಡಿ ಎತ್ತರ, ಗೋಧಿ ಬಣ್ಣ, ನೀಳ ಕೂದಲು, ಕೊರಳಿನಲ್ಲಿ ಕರಮಣಿ ತಾಳಿ ಇದೆ, ಮನೆಯಿಂದ ಹೋಗುವಾಗ ಮಾಸಲು ಬಣ್ಣದ ನೈಟಿ ಹಾಕಿರುತ್ತಾಳೆ. ಮಕ್ಕಳಾದ ಮಗ ಕಾರ್ತಿಕ್ 4ನೇ ತರಗತಿ ಹಾಗೂ ಮಗಳು ಭೂಮಿಕ 3ನೇ ತರಗತಿ ಓದುತ್ತಿದ್ದು, ನಾಲ್ಕುವರೆ ಅಡಿ ಎತ್ತರ, ಗೋದಿ ಬಣ್ಣ ಹೊಂದಿದ್ದು, ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುವರು,
ಮನೆಯಿಂದ ಹೋಗುವಾಗ ಇಬ್ಬರೂ ಶಾಲಾ ಸಮವಸ್ತçವನ್ನೇ ಧರಿಸಿರುತ್ತಾರೆ.ಈ ಮೇಲ್ಕಂಡವರ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಪೋಲಿಸ್ ಅಧೀಕ್ಷಕರು ಚಿತ್ರದುರ್ಗ ದೂರವಾಣಿ ಸಂಖ್ಯೆ : 9480803101, ಪೋಲಿಸ್ ಉಪಾಧೀಕ್ಷಕರು ಚಿತ್ರದುರ್ಗ ಉಪ ವಿಭಾಗ ದೂರವಾಣಿ ಸಂಖ್ಯೆ : 9480803120, ಪೋಲಿಸ್ ನಿರೀಕ್ಷಕರು ತುರುವನೂರು ಪೋಲಿಸ್ ಠಾಣೆ ದೂರವಾಣಿ ಸಂಖ್ಯೆ : 9480803149 ಗೆ ಸಂಪರ್ಕಿಸಲು ತುರುವನೂರು ಪೋಲಿಸ್ ಠಾಣೆ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.