i
ಲೋಕಸಭಾ ಚುನಾವಣೆ: 2 ನಾಮಪತ್ರ ಸಲ್ಲಿಕೆ…
ಚಂದ್ರವಳ್ಳಿ ನ್ಯೂಸ್, ತುಮಕೂರು:
ಲೋಕಸಭಾ ಕ್ಷೇತ್ರ ಚುನಾವಣೆಗೆ ಸಂಬಂಧಿಸಿದಂತೆ ಮಾರ್ಚ್ ೨೮ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಮಾರ್ಚ್ ೩೦, ೨೦೨೪ರಂದು ಇಬ್ಬರು ಅಭ್ಯರ್ಥಿಗಳಿಂದ ಒಟ್ಟು ೨ ನಾಮಪತ್ರಗಳು ಸಲ್ಲಿಕೆಯಾಗಿರುತ್ತವೆ.
ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸಿದ್ಧರಾಮೇಗೌಡ ಟಿ.ಬಿ.(೫೮ ವರ್ಷ, ತಮ್ಮಡಿಹಳ್ಳಿ, ಮಸ್ಕಲ್ ಅಂಚೆ, ಪಿನ್ ಕೋಡ್-೫೭೨೧೨೨, ಗೂಳೂರು ಹೋಬಳಿ, ತುಮಕೂರು ತಾಲ್ಲೂಕು) ಹಾಗೂ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿಯಾಗಿ ಪ್ರದೀಪ್ ಕುಮಾರ್ (೩೪ವರ್ಷ, ಗಂಜಲಗುಂಟೆ, ತರೂರು ಅಂಚೆ, ಕಳ್ಳಂಬೆಳ್ಳ ಹೋಬಳಿ, ಶಿರಾ ತಾಲ್ಲೂಕು, ತುಮಕೂರು) ಅವರುಗಳು ಮಾರ್ಚ್ ೩೦ರಂದು ನಾಮಪತ್ರ ಸಲ್ಲಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.