i
ಅಪ್ರಾಪ್ತ ಎಸ್ಎಸ್ಎಲ್ ಸಿ ಓದುತ್ತಿದ್ದ ಅಕ್ಕನಮಗಳಿಗೆ ಅತ್ಯಾಚಾರ ಮಾಡಿದ ಸೋದರ ಮಾವ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಅಪ್ರಾಪ್ತೆಯ ಮೇಲೆ ನಿರಂತರವಾಗಿ ಬಲಾತ್ಕಾರ ನಡೆಸಿರುವ ಬಗ್ಗೆ ಆಕೆಯ ಸೋದರ ಮಾವನ ವಿರುದ್ಧವೇ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಖಾಸಗಿ ಸಂಸ್ಥೆಗಳಿಗೆ ಕಾರ್ಮಿಕರನ್ನು ಒದಗಿಸುವ ಸುನೀಲ್ ಎಂಬುವನಿಂದ ನಿರಂತರ ಬಲಾತ್ಕಾರವಾಗಿರುವ ಬಗ್ಗೆ ಬಾಲಕಿಯ ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿದ್ದ ಬಾಲಕಿಯ ಮೇಲೆ ಬಲಾತ್ಕಾರ ನಡೆಸಿರುವುದು ಪೋಕ್ಸೋ ಅಡಿ ದೂರು ದಾಖಲಾಗಿದೆ.
ಸುನೀಲ್ ಶಿವಮೊಗ್ಗದಲ್ಲಿಯೇ ನಿವಾಸಿಯಾಗಿದ್ದು, ತನ್ನ ತಾಯಿಯೊಂದಿಗೆ ವಾಸವಾಗಿದ್ದಾನೆ. ತನ್ನ ಸಹೋದರಿ ಮನೆಗೆ ಬಂದು ಸಹೋದಿಯ ಮಗಳನ್ನೇ ಲೈಂಗಿಕವಾಗಿ ಬಳಸಿಕೊಂಡಿದ್ದು ಈ ಬಗ್ಗೆ ತಾಯಿಯ ದೂರಿನಮೇಲೆ ಆತನನ್ನು ಬಂಧಿಸಲಾಗಿದೆ.
ಈತ ಪೊಲೀಸರಿಗೆ ತಾನು ಮೀಡಿಯಾದವನುಎಂದು ಹೇಳುತ್ತಿರುವುದಾಗಿ ತಿಳಿದು ಬಂದಿದೆ. ಯಾವ ಮೀಡಿಯಾ ಎಂಬುದು ತಿಳಿದು ಬರಬೇಕಿದೆ.