![](https://www.chandravallinews.com/wp-content/uploads/2024/04/WhatsApp-Image-2024-04-03-at-4.09.05-PM.jpeg)
i
ಆರು ಮುಕ್ಕಾಲು ಅಡಿ ಎತ್ತರದ ಏಕ ಶಿಲೆಯ ಶ್ರೀಶನೇಶ್ವರ ಮೂರ್ತಿ ಲೋಕಾರ್ಪಣೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದ ಐ.ಯು.ಡಿ.ಪಿ. ಲೇಔಟ್ ಮೇಲ್ಬಾಗ, ಸೂರ್ಯಪುತ್ರ ನಗರದಲ್ಲಿ ನೂತನವಾಗಿ ಶ್ರೀ ಶ್ರೀಶನೇಶ್ವರಸ್ವಾಮಿ ಲೋಕ ಕಲ್ಯಾಣ ಟ್ರಸ್ಟ್ ವತಿಯಿಂದ ನಿರ್ಮಾಣವಾಗಿರುವ ಶ್ರೀ ಶ್ರೀಶನೇಶ್ವರಸ್ವಾಮಿಯ ದೇಗುಲ ಲೋಕಾರ್ಪಣೆ ಏಪ್ರಿಲ್ ೪ ಮತ್ತು ೫ ಹಾಗೂ ೬ ಶನಿವಾರದವರೆಗೆ ಮೂರು ದಿನಗಳ ವಿವಿಧ ಧಾರ್ಮಿಕ ಸಮಾರಂಭಗಳು ನಡೆಯಲಿದ್ದು ಶ್ರೀ ಶ್ರೀಶನೇಶ್ವರಸ್ವಾಮಿಯ ಪ್ರಾಣ ಪ್ರತಿಷ್ಠಾಪನೆ ಮತ್ತು ಗೋಪುರ ಕಳಸಾರೋಹಣ ಮಹೋತ್ಸವ ನಡೆಯಲಿದೆ ಎಂದು ಶ್ರೀ ಶ್ರೀಶನೇಶ್ವರಸ್ವಾಮಿ ಲೋಕ ಕಲ್ಯಾಣ ಟ್ರಸ್ಟ್ ಅಧ್ಯಕ್ಷ ಸಿ. ಶಂಕರಮೂರ್ತಿ ತಿಳಿಸಿದ್ದಾರೆ.ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶ್ರೀ ಶ್ರೀಶನೇಶ್ವರಸ್ವಾಮಿ ಲೋಕ ಕಲ್ಯಾಣ ಟ್ರಸ್ಟ್ ಪೀಠಾಧಿಪತಿಗಳಾಗಿದ್ದ ಲಿಂಗೈಕ್ಯ ಮೋಹನ್ ಕುಮಾರ್ ಸ್ವಾಮೀಜಿ ಅವರ ಕೃಪಾಶೀರ್ವಾದೊಂದಿಗೆ ಸಮಾರಂಭ ನಡೆಯಲಿದ್ದು, ಏ ೪ ರಂದು ಗಣಪತಿ ಪೂಜೆ, ಪುಣ್ಯಾಹ, ದೇವನಾಂದಿ, ಪಂಚಗವ್ಯ, ರಕ್ಷಾಸೂತ್ರಧಾರಣೆ, ಜಲಾಧಿವಾಸ, ಕ್ಷಿರಾಧಿವಾಸ, ಧಾನ್ಯಾಧಿವಾಸ, ಮಂಗಳಾರತಿ ನಡೆಯಲಿದೆ. ಏಪ್ರಿಲ್ ೫ ರ ಬೆಳಗ್ಗೆ ೯.೦೦ ಘಂಟೆಯಿಂದ ಕಲಶಸ್ಥಾಪನೆ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಗಣಪತಿ ಹೋಮ, ರುದ್ರ ಹೋಮ, ಶನೈಶ್ವರ ಹೋಮ, ೧೨.೩೦ಕ್ಕೆ ಪುರ್ಣಾಹುತಿ, ಮಹಾಮಂಗಳಾರತಿ ಸಂಜೆ ೫ ಘಂಟೆಗೆ ವಾಸ್ತು ಹೋಮ, ರಾಕ್ಷೆಘ್ನ ಹೋಮ, ಬಲಿಪ್ರಧಾನ ರತ್ನಾಧಿವಾಸ, ಚಿತ್ರಪಟಾಧಿ ವಾಸ, ಫಲಾಧಿವಾಸ, ಶಯ್ಯಧಿವಾಸ ಅಷ್ಟಬಂಧನ ನಡೆಯಲಿದೆ ಎಂದರು.೬ರ ಶನಿವಾರ ಬೆಳಗ್ಗೆ ೪.೩೦ ರಿಂದ ೪.೫೫ಕ್ಕೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಶ್ರೀ ಶನೈಶ್ವರಸ್ವಾಮಿಯವರ ಪ್ರತಿಷ್ಠಾಪನ ಕುಂಭಾಭಿಷೇಕ ದೇವತಾ ದರ್ಶನ ಮೂಹೂರ್ತ. ಮತ್ತು ಬೆಳಗ್ಗೆ ೧೦.೩೦ ರಿಂದ ಗೋಪುರ ಕಳಸ ಸ್ಥಾಪನೆಯನ್ನು ಬೆಲಗೂರಿನ ಶ್ರೀ ಹನುಮನ್ನದ್ದೂತ ಅವಧೂತರಾದ ಶ್ರೀ ಬಿಂಧುಮಾಧವ ಶರ್ಮಾ ಗುರುಗಳ ಶಿಷ್ಯರಾದ ಶ್ರೀ ವಿಜಯಮಾರುತಿ ಶರ್ಮಾ ಗುರುಗಳ ಅಮೃತ ಹಸ್ತದಿಂದ ಶ್ರೀ ಶ್ರೀಶನೈಶ್ವರಸ್ವಾಮಿಯ ಪ್ರತಿಷ್ಠಾಪನಾ ಮತ್ತು ಕಳಶರೋಹಣ ಕಾರ್ಯಕ್ರಮ ನೆರವೇರಲಿದೆ ಎಂದರು.ಸಮಿತಿ ಉಪಾಧ್ಯಕ್ಷ ಎಂ.ಕೆ.ರಘುನಾಥ್ ಮಾತನಾಡಿ, ಗೋಪುರಕಳಸ ಸ್ಥಾಪನೆ ನಂತರ ಅಭಿಷೇಕ ಭಕ್ತರಿಂದ ತತ್ಯನ್ಯಾಸಾದಿ ಕಲಾಹೋಮ, ಶನೈಶ್ವರ ಮೂಲಮಂತ್ರ ಹೋಮ, ಮಹಾಪೂರ್ಣಹುತಿ ಕುಂಭಾಭಿಷೇಕ, ಪಂಚಾಮೃತ ಅಭಿಷೇಕ, ರುದ್ರಭಿಷೇಕ, ಮಂಗಳದ್ರವ್ಯಗಳ ಅಭಿಷೇಕ, ಅಲಂಕಾರ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಮಧ್ಯಾಹ್ನ ೧೨.೩೦ ಗಂಟೆಯಿಂದ ಅನ್ನ ಸಂತರ್ಪಣೆ ನಡೆಯಲಿದೆ ಎಂದರು.ಕಾರ್ಯಕಾರಿ ಸಮಿತಿ ಸಹ ಕಾರ್ಯದರ್ಶಿ ಎಸ್.ಟಿ. ನವೀನ್ ಕುಮಾರ್ ಮಾತನಾಡಿ, ಆರು ಮುಕ್ಕಾಲು ಅಡಿ ಎತ್ತರದ ಏಕ ಶಿಲೆಯಲ್ಲಿ ಶನಿದೇವರ ಮೂರ್ತಿಯನ್ನು ಕೆತ್ತಲಾಗಿದೆ, ದಾನವಾಗಿ ಬಂದಂತಹ ೯೦*೬೦ ಅಳತೆಯ ಜಾಗದಲ್ಲಿ ೯ ದೇವಾಲಯಗಳನ್ನು ನಿರ್ಮಾಣ ಮಾಡಬೇಕೆಂದು ಕೆಲಸವನ್ನು ಮಾಡಲಾಗುತ್ತಿದೆ. ಕಳೆದ ೧೬ ವರ್ಷದಿಂದ ದೇವಾಲಯದ ಕೆಲಸವನ್ನು ಮಾಡಲಾಗುತ್ತಿದೆ. ಈ ಕಾರ್ಯಕ್ರಮ ನಡೆಯುವ ದಿನದಲ್ಲಿ ೩ ರಿಂದ ೫ ಸಾವಿರ ಜನ ಬರುವ ನೀರೀಕ್ಷೆ ಇದೆ ಸಮಸ್ತ ಭಕ್ತಾದಿಗಳು ಶ್ರೀಸ್ವಾಮಿಯ ಪ್ರಾಣ ಪ್ರತಿಷ್ಠಾಪನೆ ಮತ್ತು ಗೋಪುರ ಕಳಸಾರೋಣ ಪೂಜಾ ಕಾರ್ಯಕ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು. ಕಾರ್ಯಕಾರಿ ಸಮಿತಿ ಮಾಸ್ಟರ್, ಡಿ. ಗೋಪಿ, ಮಾಲತೇಶ್ ಅರಸ್ ಉಪಸ್ಥಿತರಿದ್ದರು.