i
5-8 ನೇ ತರಗತಿ ಸರ್ಕಾರಿ ಶಾಲಾ ಮಕ್ಕಳಿಗಾಗಿ ಉಚಿತ ಮನಸ್ಫೂರ್ತಿ ಬೇಸಿಗೆ ಶಿಬಿರ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
2024-25ನೇ ಸಾಲಿನಲ್ಲಿ ಮಾನಸಾಧಾರ ಟ್ರಸ್ಟ್, ಮನಸ್ಪೂರ್ತಿ ಕಲಿಕಾ ತರಬೇತಿ ಕೇಂದ್ರ, ನಮ್ಮ ಹಳ್ಳಿ ಥಿಯೇಟರ್ ಶಿವಮೊಗ್ಗ ಇವರ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಓದುತ್ತಿರುವ 5 ರಿಂದ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 50 ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರವನ್ನು ದಿನಾಂಕ : 15/04/2024 ರಿಂದ 27/04/2024 ರವರೆಗೆ ಬೆಳಗ್ಗೆ 9:30 ರಿಂದ ಸಂಜೆ 4 ಗಂಟೆಯವರೆಗೆ ಸ್ಮೃತಿ ಸಭಾಂಗಣ, ಮನಸ್ಪೂರ್ತಿ ಕಲಿಕಾ ಕೇಂದ್ರ, ಜೆ.ಪಿ.ಎನ್ ರಸ್ತೆ, ಶಿವಮೊಗ್ಗ ಈ ಸ್ಥಳದಲ್ಲಿ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಮೌಲ್ಯಯುತ ಶಿಕ್ಷಣ, ಸಾಂಸ್ಕೃತಿಕ ಕಾರ್ಯಕ್ರಮಗಳು, ನಾಟಕ, ಚಿತ್ರಕಲೆ, ಆರೋಗ್ಯ, ವ್ಯಾಯಾಮ, ಸಾಮಾನ್ಯ ಜ್ಞಾನ ಮತ್ತು ಮಕ್ಕಳ ಹಕ್ಕುಗಳು ಸೇರಿದಂತೆ ವಿವಿಧ ವಿಷಯಗಳನ್ನು ಕಲಿಸಲಾಗುವುದು. ಶಿಬಿರದಲ್ಲಿ ಭಾಗವಹಿಸಲಿಚ್ಚಿಸುವ ಮಕ್ಕಳನ್ನು
ದಿನಾಂಕ : 06/04/2024 ರೊಳಗೆ ಸ್ಮೃತಿ ಸಭಾಂಗಣ, ಮನಸ್ಪೂರ್ತಿ ಕಲಿಕಾ ಕೇಂದ್ರ, ಜೆ.ಪಿ.ಎನ್ ರಸ್ತೆ, ಶಿವಮೊಗ್ಗ ಕಚೇರಿಗೆ ಬಂದು ಶಾಲಾ ದೃಢೀಕರಣ ಹಾಗೂ ವಿದ್ಯಾರ್ಥಿಯ ಭಾವಚಿತ್ರದೊಂದಿಗೆ ನೊಂದಣಿ ಮಾಡಿಸಲು ಪೋಷಕರು, ಶಿಕ್ಷಕರು ಹಾಗೂ ಸಾರ್ವಜನಿಕರಲ್ಲಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಶಿಬಿರದ ಸಂಚಾಲಕಿ ರಂಗನಾಯಕಿ 9663645373, ಮಂಜುನಾಥ್ ಸ್ವಾಮಿ 9845014229, 8867540973 ರವರನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.