![](https://www.chandravallinews.com/wp-content/uploads/2024/04/WhatsApp-Image-2024-04-20-at-9.57.53-PM-2.jpeg)
i
ಕೋಟ್ಯಧೀಶೆ ಪ್ರಿಯಾಂಕಾ ಜಾರಕಿಹೊಳಿ…
ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿರುವ ಪ್ರಿಯಾಂಕಾ ಸತೀಶ ಜಾರಕಿಹೊಳಿ ರಾಜಕೀಯಕ್ಕೆ ಅನನುಭವಿಯಾದರೂ ಆಸ್ತಿ ಸಂಪಾದನೆಯಲ್ಲಿ ಕೋಟ್ಯಾಧೀಶೆ.
ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ತಮ್ಮ ಆದಾಯ ಪ್ರಮಾಣ ಪತ್ರ ಸಲ್ಲಿಸಿರುವ ಪ್ರಿಯಾಂಕಾ ಸತೀಶ ಜಾರಕಿಹೊಳಿ ಅವರು 7.29 ಕೋಟಿ ರೂ ಚರಾಸ್ತಿ ಮತ್ತು 1.82 ಕೋಟಿ ಸ್ಥಿರಾಸ್ತಿ ಇದೆ.
ಕೈಯಲ್ಲಿ 4.87 ಲಕ್ಷ ನಗದು ಹಣ ಹೊಂದಿದ್ದಾರೆ. 6.24 ಲಕ್ಷ ರೂ ಚಿನ್ನಾಭರಣವಿದೆ. ಆದರೆ ಸಚಿವರ ಪುತ್ರಿ ಬಳಿ ಯಾವುದೇ ವಾಹನವಿಲ್ಲ. ವಾರ್ಷಿಕ 1.64 ಕೋಟಿ ಆದಾಯ ತೋರಿಸಿದ್ದಾರೆ. 2018 ರಲ್ಲಿ ಇವರ ಆದಾಯ 32.90 ಲಕ್ಷ ರೂ ಗಳಷ್ಟಿತ್ತು. ಆದಾಯದ ಜೊತೆಗೆ ಪ್ರಿಯಾಂಕಾ ಅವರಿಗೆ 1.57 ಕೋಟಿ ಸಾಲ ಇದೆ.
ಈ ಸಾಲ ತಂದೆ ಸತೀಶ ಜಾರಕಿಹೊಳಿ ಹಾಗೂ ತಾಯಿ ಎಸ್ ಎಸ್ ಜಾರಕಿಹೊಳಿ ಅವರ ಹೆಸರಿನಲ್ಲಿದೆ. ಸತೀಶ ಜಾರಕಿಹೊಳಿ ಅವರು 1.47 ಕೋಟಿ ಕೈ ಸಾಲ ನೀಡಿದ್ದಾರೆ.