i
ವಕೀಲರ ಸಂಘದಲ್ಲಿ ಮತಯಾಚನೆ…
ಚಂದ್ರವಳ್ಳಿ ನ್ಯೂಸ್,
ಶಿವಮೊಗ್ಗ : Polling in the Bar Association…
ವಕೀಲರ ಸ್ಪಂದನೆಯಿಂದ ನನ್ನ ಗೆಲುವಿನ ವಿಶ್ವಾಸ ಇನ್ನೂ ಹೆಚ್ಚಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಇಂದು ನಗರದ ಜಿಲ್ಲಾ ನ್ಯಾಯಾಲಯಕ್ಕೆ ಭೇಟಿ ನೀಡಿ ವಕೀಲರ ಮತಯಾಚನೆ ಮಾಡಿ, ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಮಟ್ಟದ ವಿಚಾರಗಳು ಬಂದಾಗ ವಕೀಲರು ತಮ್ಮದೇ ಆದ ರೀತಿಯಲ್ಲಿ ಶಕ್ತಿ ಮೀರಿ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ ಎಂದರು.
ಇಂದು ವಕೀಲರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅನೇಕ ಸಲಹೆ ಸೂಚನೆಗಳನ್ನು ಕೊಟ್ಟಿದ್ದಾರೆ. ಅದೆಲ್ಲವನ್ನು ಉತ್ತಮ ರೀತಿಯಲ್ಲಿ ಪರಿಗಣಿಸಲಾಗುವುದು. ಶಿವಮೊಗ್ಗ ನಗರವನ್ನು ಮಾದರಿ ನಗರವನ್ನಾಗಿಸಲು ಹಾಗೂ ಉತ್ತಮ ನ್ಯಾಯಾಲಯ ಕ್ಯಾಂಪಸ್ನ್ನು ನಿರ್ಮಿಸುವ ಬಗ್ಗೆಯೂ ಸಹ ವಕೀಲರಿಂದ ಸೂಚನೆ ಬಂದಿದೆ ಎಂದ ರು.
ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಬಸಪ್ಪ ಗೌಡ ಸೇರಿದಂತೆ ಅನೇಕ ವಕೀಲರುಗಳು ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.