![](https://www.chandravallinews.com/wp-content/uploads/2024/04/WhatsApp-Image-2024-04-28-at-7.51.26-PM-1024x491.jpeg)
i
ಪುರಾತನ ಕಾಲದ ಮನೆಗೆ ಅಗ್ನಿ ಆಕಸ್ಮಿಕ: ಕೋಟ್ಯಂತರ ವಸ್ತು ಭಸ್ಮ…
ಚಂದ್ರವಳ್ಳಿ ನ್ಯೂಸ್, ಕಾರ್ಗಲ್:
ತುಮರಿ ಸಮೀಪದ ಕುದರೂರು ಗ್ರಾಮದ ಹುರುಳಿ ಎಂಬಲ್ಲಿ ಪುರಾತನ ಕಾಲದ ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಕೋಟ್ಯಂತರ ರೂ. ಆಸ್ತಿ- ಪಾಸ್ತಿ ಹಾನಿಯಾಗಿದೆ.
ಹುರುಳಿಮಹಾವೀರ ಜೈನ್ ಎನ್ನುವವರ ಮನೆ ಇದಾಗಿದೆ. ಶನಿವಾರ ಬೆಳಗ್ಗೆ ಜೈನ್ ಅವರು ಸಂಬಂಧಿಕರ ಮನೆಗೆ ತೆರಳಿದ್ದ ವೇಳೆ ಘಟನೆ ಸಂಭವಿಸಿದೆ.
ಮನೆಯೊಳಕ್ಕೆ ದಟ್ಟ ಹೊಗೆ ತುಂಬಿಕೊಂಡಿದ್ದ ನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ಮಾಲಕರಿಗೆ ಸುದ್ದಿ ತಲುಪಿಸಿದ್ದರು. ಆದರೆ ಅವರು ಬರುವುದರೊಳಗೆ ಕಾಳುಮೆಣಸು, ಅಡಿಕೆ, ಭತ್ತ, ಬೆಲೆಬಾಳುವ ಪೀಠೋಪಕರಣ, ಆಭರಣ ಸುಟ್ಟ ಹೋಗಿವೆ.