i
ಕಾರು ಚಾಲಕನಿಂದ ಬಹಿರಂಗವಾದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಸೆಕ್ಸ್…
ಚಂದ್ರವಳ್ಳಿ ನ್ಯೂಸ್, ಹಾಸನ:
ಪೆನ್ ಡ್ರೈವ್ ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಪೆನ್ಡ್ರೈವ್ನಿಂದ ಲೀಕ್ಆದ ವಿಡಿಯೋಗಳ ಮೂಲ ಎನ್ನಲಾದ ಡ್ರೈವರ್ಕಾರ್ತಿಕ್ವಿಡಿಯೋ ಹೊರಬಿದ್ದಿದೆ. ರೆಕಾರ್ಡ್ಮಾಡಲಾದ ವಿಡಿಯೋ ಹೇಳಿಕೆಯಲ್ಲಿ ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಇಡೀ ಪ್ರಕರಣದಲ್ಲಿ ವಿಡಿಯೋ ಲೀಕ್ಹೇಗಾಯ್ತು ಎಂಬ ವಿಚಾರಕ್ಕೆ ಸಂಬಂಧಿಸದಿಂತೆ ಕಾರ್ತಿಕ್ಮಾತನಾಡಿದ್ದಾರೆ.
ಯಾವುದೋ ಅಜ್ಞಾತ ಸ್ಥಳದಲ್ಲಿ ಸೆರೆ ಹಿಡಿಯಲಾದಂತಿರುವ ವಿಡಿಯೋದಲ್ಲಿ ಕಾರ್ತಿಕ್, ತಮಗೆ ನ್ಯಾಯ ಸಿಗುವ ಕಾರಣಕ್ಕೆ ಪೆನ್ಡ್ರೈವ್ವಿಡಿಯೋ ,ಫೋಟೋಗಳ ಕಾಪಿಯೊಂದನ್ನ ದೇವರಾಜ ಗೌಡರರಿಗೆ ನೀಡಿದ್ದೇನೆ. ಅವರು ವಕಾಲತ್ತು ವಹಿಸಿಕೊಂಡ ಕಾರಣಕ್ಕೆ ಅವರಿಗೆ ಕೊಟ್ಟಿದ್ದೆ ಹೊರತು ಮತ್ಯಾರಿಗೂ ಕೊಟ್ಟಿಲ್ಲ ಎಂದಿದ್ದಾರೆ.
ತಾವು ಕೊಟ್ಟ ವಿಡಿಯೋಗಳನ್ನು ಅವರು ಹೇಗೆ ಬಳಸಿಕೊಂಡರು? ಅಥವಾ ಅದನ್ಯಾರಿಗಾದರೂ ಹಂಚಿದರೇ ಎಂಬ ವಿಚಾರಗಳು ತಮಗೆ ಗೊತ್ತಿಲ್ಲ. ಇದರಲ್ಲಿ ಕಾಂಗ್ರೆಸ್ನಾಯಕರ ಪಾತ್ರಗಳಿಲ್ಲ. ಕಾಂಗ್ರೆಸ್ನವರು ನನಗೆ ಅನ್ಯಾಯವಾದಾಗಲೂ ನನ್ನ ನೆರವಿಗೆ ಬಂದಿಲ್ಲ. ಅವರಿಗೆ ನಾನ್ಯಾಕೆ ವಿಡಿಯೋ ಕಾಪಿ ಕೊಡಲಿ ಎಂದು ಪ್ರಶ್ನಿಸಿದ್ದಾರೆ.
ಈ ಎಲ್ಲಾ ವಿಚಾರಗಳನ್ನು ಎಸ್ಐಟಿ ಮುಂದೆ ಹಾಜರಾಗಿ ವಿವರ ನೀಡುವುದಾಗಿ ಕಾರ್ತಿಕ್ತಿಳಿಸಿದ್ದು, ಆನಂತರ ಮಾಧ್ಯಮಗಳ ಎದುರು ಬಂದು ಮಾತನಾಡುತ್ತೇನೆ ಎಂದಿದ್ದಾರೆ.
ಯಾರು ಈ ಕಾರ್ತಿಕ್?
ಸದ್ಯ ಹೊರಬಿದ್ದಿರುವ ಹಾಸನ ಪೆನ್ಡ್ರೈವ್ವಿಡಿಯೋ ಲಿಂಕ್ಕೇಸ್ನಲ್ಲಿ ಕಾರ್ತಿಕ್ರಿಂದ ಎಲ್ಲಾ ದೃಶ್ಯಗಳು ಹೊರಬಿದ್ದಿರುವ ಬಗ್ಗೆ ಮಾಹಿತಿ ಹೊರಬಂದಿತ್ತು. ಪ್ರಜ್ವಲ್ರೇವಣ್ಣರ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ತಿಕ್ಕಳೆದ ವರ್ಷ ರೇವಣ್ಣರ ಕುಟುಂಬದ ಜೊತೆಗೆ ವೈಮನಸ್ಯ ಹೊಂದಿದ್ದರು. ರೇವಣ್ಣರ ಕುಟುಂಬ ತಮ್ಮ ಭೂಮಿಯನ್ನು ಕಿತ್ತುಕೊಂಡು ಟಾರ್ಚರ್ಕೊಟ್ಟಿದೆ ಅಂತಾ ಪೊಲೀಸ್ಸ್ಟೇಷನ್ಮೆಟ್ಟಿಲೇರಿದ್ದರು. ಆನಂತರ ಅದೇ ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್ಮೆಟ್ಟಿಲೇರಲು ಮುಂದಾಗಿದ್ದರು. ಇದೇ ಹೊತ್ತಿನಲ್ಲಿ ರೇವಣ್ಣರ ಕುಟುಂಬ ಕೋರ್ಟ್ನಿಂದ ವಿಡಿಯೋ ಹರಿದಾಡದಂತೆ ಸ್ಟೇ ತಂದಿತ್ತು. ಈ ಎಲ್ಲಾ ವಿಚಾರ ಹಂಚಿಕೊಂಡಿರುವ ಕಾರ್ತಿಕ್ಇದೀಗ ಎಸ್ಐಟಿ ಮುಂದೆ ಹೋಗಲು ನಿರ್ಧರಿಸಿದೆ.